ಜಟ್ಟಿಪಳ್ಳ ಬೊಳಿಯಮಜಲು ರಸ್ತೆಯ ಸೂರ್ತಿಲ ಎಂಬಲ್ಲಿ ಕಾಲೊನಿ ನಿರ್ಮಾಣಗೊಂಡಿದ್ದು, ಹಲವು ಮನೆಗಳು ಈಗಾಗಲೇ ನಿರ್ಮಾಣಗೊಂಡಿವೆ. ರಸ್ತೆ ಬದಿ ಚರಂಡಿಗೆ ಬಿಟ್ಟ ಜಾಗದಲ್ಲಿ ಕಲ್ಲು ಕಟ್ಟಿ ಮನೆ ಛಾವಣಿ ನಿರ್ಮಿಸಿದ ಪರಿಣಾಮ ಸಮಸ್ಯೆ ಎದುರಾಗಿದ್ದು, ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಈ ಹಿಂದೊಮ್ಮೆ ಇದೇ ಪರಿಸರದಲ್ಲಿ ಮನೆಯವರು ರಸ್ತೆ ಬದಿ ಕಲ್ಲು ಕಟ್ಟಿ ಛಾವಣಿ ಇಳಿಸಿದಾಗ ನಗರ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅದನ್ನು ತೆರವುಗೊಳಿಸಿದ್ದರು. ಇದೀಗ ಮತ್ತೆ ಸೂರ್ತಿಲ ಎಂಬಲ್ಲಿ ಎರಡು ಮನೆಯವರು ನಗರ ಪಂಚಾಯತಿಯ ಗಮನಕ್ಕೆ ತಾರದೆ ಮನೆ ಛಾವಣಿ ನಿರ್ಮಾಣಗೊಂಡಿದ್ದು, ಈ ಬಗ್ಗೆ ನಗರ ಪಂಚಾಯತಿ ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಹಿಂದಿನಿಂದಲೇ ಇಲ್ಲಿ ಚರಂಡಿ ವ್ಯವಸ್ಥೆ ಸರಿಇಲ್ಲದೆ ಮಾರ್ಗದಿಂದ ಕೆಳಗೆ ವಾಸಿಸುವ ಮನೆಯವರ ಅಂಗಳಕ್ಕೆ ಮಳೆ ನೀರು ನುಗ್ಗಿ ಹಲವು ಸಮಸ್ಯೆಗಳು ಎದುರಾಗಿದೆ. ಇನ್ನು ಮಳೆಗಾಲದಲ್ಲಿ ಇದಕ್ಕಿಂತ ಹೆಚ್ಚು ಸಮಸ್ಯೆಯಾಗಬಹುದೆಂದು ಸ್ಥಳಿಯರು ಆಡಿಕೊಳ್ಳುತ್ತಿದ್ದಾರೆ.