Breaking News

ಮೊಗಪ್ಪೆ ಕಟ್ಟಕ್ಕೆ ಕಿಡಿಗೇಡಿಗಳಿಂದ ಬಾಟ್ಲಿ ಎಸೆತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗ್ರಾಮ ಪಂಚಾಯತ್ ಅಧ್ಯಕ್ಷರ ಭೇಟಿ ಪರಿಶೀಲನೆ

ಬೆಳ್ಳಾರೆ ಗ್ರಾಮದ ನೆಟ್ಟಾರು ಸಮೀಪದ ಮೊಗಪ್ಪೆ ಕಟ್ಟಕ್ಕೆ ಕಿಡಿಗೇಡಿಗಳು ಬಿಯರ್ ಹಾಗೂ ಇನ್ನಿತರ ಮದ್ಯದ ಬಾಟಲ್ ಗಳನ್ನು ಕುಡಿದು ನೀರಿಗೆ ಬಿಸಾಡಿರುವುದರ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಪನ್ನೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಾರೊ ಕಿಡಿಗೇಡಿಗಳು ಕೆರೆಯ ಹತ್ತಿರ ಕುಳಿತು ಪಾರ್ಟಿ ಮಾಡಿ ಬಿಯರ್ ,ಮದ್ಯ ಕುಡಿದು ಬಾಟಲಿಗಳನ್ನು ಕೆರೆಗೆ ಬಿಸಾಡಿದ್ದು ,ಬಾಟ್ಲಿಗಳನ್ನು ಪುಡಿ ಮಾಡಿ ಹಾಕಿರುವುದು ಕಂಡು ಬಂದಿದೆ.
ಬಾಟ್ಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಕೆರೆಗೆ ಬಿಸಾಡಿ ನೀರು ಮಲಿನಗೊಳಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಅಧ್ಯಕ್ಷರು ಭರವಸೆ ನೀಡಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಗೌರಿ ನೆಟ್ಟಾರು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಾವಡಿಬಾಗಿಲು,ಅಕ್ಷಯ ಯುವಕ ಮಂಡಲ ನೆಟ್ಟಾರು ಗೌರವಾಧ್ಯಕ್ಷರಾದ ವೆಂಕಟರಮಣ ಗೌಡ ನೆಟ್ಟಾರು,ಕೋಶಾಧಿಕಾರಿ ಪ್ರತೀಕ್ ಮೊಗಪ್ಪೆ ಹಾಗೂ ಶೈಲೇಶ್ ನೆಟ್ಟಾರು ಜತೆಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.