ಸಂಪಾಜೆ, ಊರುಬೈಲು, ಚೆಂಬು ಸಂಪರ್ಕ ಸೇತುವೆ ವಾಹನ ಸಂಚಾರಕ್ಕೆ ಮುಕ್ತ Posted by suddi channel Date: April 06, 2021 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 347 Views 3 ವರ್ಷಗಳ ಹಿಂದೆ ಜೋಡುಪಾಲ ದುರಂತದ ಸಂದರ್ಭ ಊರುಬೈಲು, ಚೆಂಬು ಸಂಪರ್ಕ ಸೇತುವೆ ಸಂಪೂರ್ಣ ಕೊಚ್ಚಿಹೋಗಿತ್ತು. ಇದರ ಕಾಮಗಾರಿಗೆ ಮಳೆ ಪರಿಹಾರ ನಿಧಿಯಿಂದ ಮತ್ತು ಶಾಸಕರ ಅನುದಾನದಿಂದ 1.20 ಕೋಟಿ ಅನುದಾನದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ.