ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ,ಕುರಲ್ ತುಳುಕೂಟ ದುಗಲಡ್ಕ, ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಆಶ್ರಯದಲ್ಲಿ ಬಿಸು ದಿನ ಎ.14ರಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಬಲೇ ತಾರಾಯಿ ಕುಟ್ಟುಕೋ ಪಂತೋ ಮತ್ತು ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ ಎಂದು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ.ವಿಶ್ವನಾಥ ಹೇಳಿದರು.
ಇಂದು ಸುಳ್ಯ ತಾಲೂಕು ತುಳು ಸಾಹಿತ್ಯ ಸಮ್ಮೇಳನದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.
“ಬಲೇ ತಾರಾಯಿ ಕುಟ್ಟುಕೋ ಪಂತೋ “ತೆಂಗಿನಕಾಯಿ ಕುಟ್ಟುವ ಸ್ಪರ್ಧೆ ಸಾರ್ವಜನಿಕರಿಗೆ ನಡೆಸಲಾಗುವುದು.ವಿಜೇತರಿಗೆ ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು.ಮಹಿಳೆಯರಿಗೆ,ಪುರುಷರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸಂಘಟಕರಾದ ಕಳಂಜ ವಿಶ್ವನಾಥ ರೈ,ಜೆ.ಕೆ.ರೈ,ಕೂಸಪ್ಪ ಗೌಡ ಮುಗುಪ್ಪು,ಸುಭಾಶ್ಚಂದ್ರ ರೈ ತೋಟ,ಕರುಣಾಕರ ಶೆಟ್ಟಿ ನಾಲ್ಗುತ್ತು ಉಪಸ್ಥಿತರಿದ್ದರು.