ಅಮರಮುಡ್ನೂರು ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಸಹಯೋಗದಲ್ಲಿ ಗ್ರಾಮದ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕೋವಿಡ್ 19 ಲಸಿಕೆ ನೀಡಲಾಗುವುದು. ಗ್ರಾಮದ ಕೇಂದ್ರಗಳಲ್ಲಿ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಏ. 7 ರಂದು ದೊಡ್ಡತೋಟ ಸ.ಉ.ಹಿ.ಪ್ರಾ.ಶಾಲೆಯಲ್ಲಿ, ಏ .8 ರಂದು ಅಜ್ಜನಗದ್ದೆ ಸರಕಾರಿ ಶಾಲೆಯಲ್ಲಿ, ಏ. 10 ರಂದು ಕುಕ್ಕುಜಡ್ಕ ಸರಕಾರಿ ಶಾಲೆಯಲ್ಲಿ ಮತ್ತು ಏ.15 ರಂದು ಸರಕಾರಿ ಶಾಲೆ ಶೇಣಿಯಲ್ಲಿ ಲಸಿಕೆ ನೀಡಲಾಗುವುದು. ಗ್ರಾಮಸ್ಥರು ಲಸಿಕೆ ಪಡೆಯಲು ಬರುವಾಗ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ತರಬೇಕು ಎಂದು ವೈದ್ಯಾಧಿಕಾರಿ ಸೂಚಿಸಿದ್ದಾರೆ.