Breaking News

ಪೆರಾಜೆಯಲ್ಲಿ ಗೌಡ ಕಪ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

 ಗೌಡ ಗ್ರಾಮ ಸಮಿತಿ ಪೆರಾಜೆ ಮಡಿಕೇರಿ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವಿನ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ಪೆರಾಜೆ ಗೌಡ ಕಪ್ ಕ್ರಿಕೆಟ್ ಹಬ್ಬ 2021 ಇದರ ಉದ್ಘಾಟನಾ ಕಾರ್ಯಕ್ರಮವು ಪೆರಾಜೆಯ ಶಾಸ್ತಾವು ದೇವಸ್ಥಾನ ಮುಂಭಾಗದ ಕಾವೇರಿ ಗದ್ದೆಯಲ್ಲಿ ಗೌಡ ಗ್ರಾಮ ಸಮಿತಿ ಪೆರಾಜೆ ಇದರ ಅಧ್ಯಕ್ಷರಾದ ಪದ್ಮಯ್ಯ ಕುಂಬಳಚೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂದ್ಯ ಕೂಟವನ್ನು ಶ್ರೀ ಶಾಸ್ತಾವು ದೇವಸ್ಥಾನ ಆಡಳಿತ ಮೊಕ್ತೇಸರರಾದ ವಿಶ್ವನಾಥ ಕುಂಬಳಚೇರಿ ಉದ್ಘಾಟಿಸಿ ಶುಭಹಾರೈಸಿದರು.
‌ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೌಡರ ಯುವ ಸೇವಾ ಸಂಘ(ರಿ) ಸುಳ್ಯ ಇದರ ಕೋಶಾಧಿಕಾರಿಗಳಾದ ತೇಜಪ್ರಸಾದ್ ಅಮಚೂರು ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕಿರಣ್ ಕುಂಬಳಚೇರಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಈ ಸಂದರ್ಭ ಶ್ರೀ ಶಾಸ್ತಾವು ದೇವಸ್ಥಾನದ ದೇವತಕ್ಕರಾದ ರಾಜಗೋಪಾಲ ರಾಮಕಜೆ, ಕಾವೇರಿಗದ್ದೆಯ ಸ್ಥಳ ಮಾಲಿಕರಾದ ಸುಬ್ರಮಣ್ಯ ಮೂಲೆಮಜಲು, ಜ್ಯೋತಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ದೊಡ್ಡಣ್ಣ ಬರಮೇಲು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮ ಸಮಿತಿ ಕಾರ್ಯದರ್ಶಿ ಪ್ರವೀಣ ಬಂಗಾರಕೋಡಿ ಸ್ವಾಗತಿಸಿ, ತರುಣ ಘಟಕದ ಕಾರ್ಯದರ್ಶಿ ಮನೋಜ್ ನಿಡ್ಯಮಲೆ ನಿರೂಪಣೆಯೊಂದಿಗೆ, ಕ್ರೀಡಾ ಸಂಚಾಲಕರಾದ ಉದಯಚಂದ್ರ ಕುಂಬಳಚೇರಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.