ಪಂಜ ಪಂಚಶ್ರೀ ಜೇಸಿಐ ವತಿಯಿಂದ ಪಾಂಡಿಗದ್ದೆ ಕಿರಿಯ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕವನ್ನು ಏ. 6ರಂದು ನೀಡಲಾಯಿತು. ಈ ಸಂದರ್ಭದಲ್ಲಿ ಪಂಜ ಪಂಚಶ್ರೀ ಜೇಸಿಐನ ಅಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ, ಕಾರ್ಯದರ್ಶಿ ಲೋಕೇಶ್ ಆಕ್ರಿಕಟ್ಟೆ, ಶಾಲಾ ಮುಖ್ಯೋಪಾಧ್ಯಾಯರಾದ ಧರ್ಮಾವತಿ ಪಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ವಾಚಣ್ಣ ಕೆರೆಮೂಲೆ ಜೇಸಿಐನ ಸ್ಥಾಪಕ ಅಧ್ಯಕ್ಷ ದೇವಿಪ್ರಸಾದ್ ಜಾಕೆ, ಧ್ವನಿವರ್ಧಕದ ಪ್ರಾಯೋಜಕರಾದ ಜೆ.ಸಿ. ಗೋಪಾಲ್ ಎಣ್ಣೆಮಜಲು ಜೆ.ಸಿ. ಸದಸ್ಯರಾದ ಶಿವಪ್ರಸಾದ ಹಾಲೆಮಜಲು, ಗುರುಪ್ರಸಾದ್ ತೊಟ, ರಾಜೇಶ್ ಕಂಬಳ, ಕೌಶಿಕ್ ಕುದ್ವ, ಶಾಲಾ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಪೋಷಕರು ಮತ್ತು ಊರವರು ಉಪಸ್ಥಿತರಿದ್ದರು.