Breaking News

ಗುತ್ತಿಗಾರು : ಅಕ್ರಮ ನಾಡಕೋವಿ ಹೊಂದಿದ್ದ ಆರೋಪಿಗಳು ದೋಷಮುಕ್ತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಕ್ರಮ ನಾಡಕೋವಿ ಹೊಂದಿದ್ದ ಗುತ್ತಿಗಾರಿನ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2013ರ ಡಿಸೆಂಬರ್ 25ರಂದು ಸಂಜೆ  5:30 ರ ಸಮಯಕ್ಕೆ ಗುತ್ತಿಗಾರು ಮೇಲಿನ ಪೇಟೆಯಲ್ಲಿ ಆರೋಪಿಗಳಾದ ದಿವಾಕರ ಆಚಾರಿ, ಸುರೇಶ್ ಹಾಗೂ ನಾಗೇಶ್ ಎಂಬುವರು ನಿಂತುಕೊಂಡಿದ್ದು,ಆ ಪೈಕಿ ಒಬ್ಬಾತ ಒಂದು ಪ್ಲಾಸ್ಟಿಕ್ ಬ್ಯಾಗನ್ನು ಕೈಯಲ್ಲಿ ಹಿಡಿದು ಕೊಂಡು ನಾಡ ಕೋವಿಯ ಮಾರಾಟದ ಕುರಿತು ಮಾತುಕತೆ ಮಾಡುತ್ತಿದ್ದರು, ಮತ್ತು ಆ ವೇಳೆಗೆ ಅಂದಿನ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ರವರು ಅಧಿಕೃತ ಮಾಹಿತಿ ಮೇರೆಗೆ ತನ್ನ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಆರೋಪಿ ದಿವಾಕರ ಆಚಾರಿ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕಳಚಿದ ಒಂದು ನಾಡಕೋವಿಯಿದ್ದುದು ಕಂಡುಬಂತು. ಅದಕ್ಕೆ ಯಾವುದೇ ಪರವಾನಿಗೆ ಇಲ್ಲದೇ ಇದ್ದ ಕಾರಣ ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ತೆಗದುಕೊಂಡು ಮುಂದೆ ದಸ್ತಗಿರಿ ಕ್ರಮವನ್ನು ಜರುಗಿಸಿ ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಂತರ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಬಳಿಕ ಈ ಪ್ರಕರಣವನ್ನು ತನಿಖೆಗೆತ್ತಿಕೊಂಡ ದ.ಕ.ಜಿಲ್ಲಾ 5 ನೇ ಹೆಚ್ಚುವರಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾ ರವರು ಆರೋಪಿಗಳ ವಿರುದ್ದ ಅಭಿಯೋಜನೆಯು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ಮಾ.24 ರಂದು ದೋಷಮುಕ್ತಗೊಳಿಸಿ ತೀರ್ಪಿತ್ತಿರುತ್ತಾರೆ .
ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ ಮತ್ತು ರಾಜೇಶ್ ಬಿ. ಜಿ. ಯವರು ವಾದಿಸಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.