Breaking News

ಸುಳ್ಯದಲ್ಲೂ ಕೆಎಸ್‌ಆರ್‌ಟಿಸಿ ಮುಷ್ಕರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪ್ರಯಾಣಿಕರ ಸೇವೆಗೆ ಖಾಸಗಿ ವಾಹನಗಳು
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಸುಳ್ಯದಲ್ಲೂ ಮುಷ್ಕರ ನಡೆಯುತ್ತಿದೆ.
ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ 6 ನೇ ವೇತನ ಆಯೋಗದ ಶಿಫಾರಸ್ಸು ಮಾದರಿಯಲ್ಲಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಈ ಮುಷ್ಕರ ನಡೆಯುತ್ತಿದ್ದು, 4 ತಿಂಗಳ ಬಳಿಕ ಮತ್ತೊಮ್ಮೆ ರಾಜ್ಯದಾದ್ಯಂತ ಸರಕಾರಿ ಸಾರಿಗೆ ಬಂದ್ ಆಗಿದೆ.
ಕಳೆದ ಡಿಸೆಂಬರ್ ೧೧ರಂದು ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಸರಕಾರಕ್ಕೆ ನೀಡುರುವ ಗಡುವು ಮುಕ್ತಾಯವಾಗಿದ್ದರೂ 6ನೇ ಆಯೋಗ ಅನುಷ್ಠಾನ ಮಾಡಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ತಿಳಿಸಿದೆ.
ಸಾರಿಗೆ ಮುಷ್ಕರವು ಸುಳ್ಯದಲ್ಲೂ ಪರಿಣಾಮ ಬೀರಿದೆ. ಸುಳ್ಯ ಬಸ್ ನಿಲ್ದಾಣದಿಂದ ಯಾವುದೇ ಸರ್ಕಾರಿ ಬಸ್‌ಗಳು ಹೊರಡುತ್ತಿಲ್ಲ. ಕೆಲವಷ್ಟು ಬಸ್‌ಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದರೆ ಬಹುತೇಕ ಬಸ್‌ಗಳು ಡಿಪೋದಲ್ಲಿ ಠಿಕಾಣಿ ಹೂಡಿವೆ. ಕಾಸರಗೋಡು-ಸುಳ್ಯ ಮಧ್ಯೆ ಸಂಚರಿಸುವ ಕೇರಳ ರಾಜ್ಯ ಸಾರಿಗೆ ಬಸ್ ಮಾತ್ರ ಸಂಚರಿಸುತ್ತಿದೆ.
ಖಾಸಗಿ ಬಸ್‌ಗಳು ಎಂದಿನಂತೆ ಓಡಾಟ ನಡೆಸುತ್ತಿವೆ. ಮಂಡೆಕೋಲು, ತೊಡಿಕಾನ, ಕರಿಕೆ, ಬಂದಡ್ಕ ಕಡೆ ಸಂಚರಿಸುವ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತಿವೆ.
ಕೆಎಸ್‌ಆರ್‌ಟಿಸಿ ಮುಷ್ಕರದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗದಂತೆ ರಾಜ್ಯ ಸರ್ಕಾರವು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದು, ಖಾಸಗಿ ವಾಹನದ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಖಾಸಗಿ ಬಸ್‌ಗಳು, ವ್ಯಾನ್‌ಗಳು, ಟೆಂಪೋ ಟ್ರಾವೆಲರ್‌ಗಳು, ಟ್ಯಾಕ್ಸಿಗಳು ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗೆ ಸಿದ್ಧವಾಗಿ ನಿಂತಿವೆ.
ಸಾರಿಗೆ ಮುಷ್ಕರದ ಕುರಿತು ಮುಂಚಿತವಾಗಿ ತಿಳಿದಿರುವ ಕಾರಣಕ್ಕೆ ಇಂದು ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಷ್ಟಾಗಿ ಕಂಡುಬಂದಿಲ್ಲ. ಬೆಳಿಗ್ಗೆ ಕಚೇರಿಗಳಿಗೆ , ಕಾಲೇಜುಗಳಿಗೆ ಬರುವವರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.