ನೂತನ ಪದಾಧಿಕಾರಿಗಳ ಆಯ್ಕೆ
ಹಿಮಾಯತುಲ್ ಇಸ್ಲಾಂ ಜಮಾಅತ್ ಕಮೀಟಿ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕದಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷರಾದ ಹಾಜಿ ಪಿ.ಎ. ಉಮ್ಮರ್ ಗೂನಡ್ಕರವರು ಅಧ್ಯಕ್ಷತೆ ವಹಿಸಿದ್ದರು. ಗತ ವರ್ಷಗಳ ವರದಿ ಹಾಗೂ ಲೆಕ್ಕ ಪತ್ರಗಳನ್ನು ಪ್ರಧಾನ ಕಾರ್ಯದರ್ಶಿ ಪಿ.ಕೆ. ಅಬೂಶಾಲಿ ಮಂಡಿಸಿದರು.
ಖತೀಬರಾದ ಮುಹಮ್ಮದ್ ಅಲೀ ಸಖಾಫಿ ಮಾದಾಪುರ ಮುಹಲ್ಲಿಂ ಹಬೀಬ್ ಹಿಮಮಿಯವರು ಉಪಸ್ಥಿತರಿದ್ದರು.
ನೂತನ ಆಡಳಿತ ಮಂಡಳಿಗೆ ಆಯ್ಕೆಗೊಳಿಸಲಾಯಿತು.
ಅಧ್ಯಕ್ಷರಾಗಿ ಹಾಜಿ ಪಿ.ಎ. ಅಬ್ದುಲ್ಲ ಕೊಪ್ಪತ್ತಕಜೆ ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಪಿ.ಎ. ದರ್ಕಾಸ್ ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ , ಉಪಾಧ್ಯಕ್ಷರಾಗಿ ಡಿ.ಆರ್. ಅಬ್ದುಲ್ ಖಾದರ್ ,ಕಾರ್ಯದರ್ಶಿಗಳಾಗಿ ಎಸ್. ಎ. ಅಶ್ರಫ್ ದೊಡ್ಡಡ್ಕ, ಬಿ. ಮುನೀರ್ ಪ್ರಗತಿ, ನಿರ್ದೇಶಕರುಗಳಾಗಿ ಹಾಜಿ ಪಿ.ಎ. ಉಮ್ಮರ್ ಗೂನಡ್ಕ, ಮಹಮ್ಮದ್ ಕುಞಿ ಗೂನಡ್ಕ, ಎಂ.ಬಿ. ಇಬ್ರಾಹಿಂ, ಪಿ.ಎ. ಮುಸ್ತಫ, ಹಾರಿಸ್ ಕೆ ಎಸ್., ಬಿ.ಎಂ. ಅಬೂಬಕ್ಕರ್ ಸಿದ್ದೀಖ್ರವರು ಆಯ್ಕೆಯಾದರು.
ಈ ಸಂಧರ್ಭ ವಿವಿದ ಕಾರ್ಯಾಚರಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ಜಮಾಅತ್ ಹಾಗೂ ಮಸೀದಿ ಮದರಸಗಳ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಉಮ್ಮರ್ ದರ್ಕಾಸ್ ಸ್ವಾಗತಿಸಿ, ವಂದಿಸಿದರು.