ಸುಬ್ರಹ್ಮಣ್ಯದ ಇಂಜಾಡಿ ಬಳಿ ರವಿ ಕಕ್ಕೆಪದವು ಮಾಲಕತ್ವದ
ಹಸಿ ಮೀನು ಮಾರುಕಟ್ಟೆ ಏ. 7ರಂದು ಉದ್ಘಾಟನೆಗೊಂಡಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಪಂಚಾಯತ್ ಸಿಬ್ಬಂದಿ ರಘು, ಜೇಸಿಐನ ಪೂರ್ವ ವಲಯಾಧಿಕಾರಿ ಚಂದ್ರಶೇಖರ್ ನಾಯರ್, ಜೆಸಿಐ ಸುಬ್ರಹ್ಮಣ್ಯದ ಅಧ್ಯಕ್ಷ ದೀಪಕ್ ನಂಬಿಯಾರ್, ಉದ್ಯಮಿಗಳಾದ ಉಮೇಶ್ ಕೆ ಎನ್, ಉದಯಕುಮಾರ್ ನೂಚಿಲ, ಗುರುಪ್ರಸಾದ್ ಮೇಲ್ನಾಡ್, ಜೇಸಿಐನ ನಿಕಟಪೂರ್ವ ಅಧ್ಯಕ್ಷ ಮಣಿಕಂಠ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಗೋಪಾಲ್ ಎಣ್ಣೆಮಜಲು ಸ್ವಾಗತಿಸಿ ವಂದಿಸಿದರು.
ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಯೇನೆಕಲ್ಲು, ಕುಲ್ಕುಂದ ಕಡೆಗಳಲ್ಲಿ ವಾಹನದ ಮೂಲಕ ಮೀನು ಮಾರಾಟಮಾಡಲಾಗುವುದೆಂದು ರವಿ ಕಕ್ಕೆಪದವು ತಿಳಿಸಿರುತ್ತಾರೆ.