ನಾಲ್ಕೂರು ಗ್ರಾಮದ ಮೆಟ್ಟಿನಡ್ಕದ ಕಾಲೇಜು ವಿದ್ಯಾರ್ಥಿಯನ್ನು ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳು ಬಲಾತ್ಕಾರವಾಗಿ ಬೈಕಿನಲ್ಲಿ ಕರೆದೊಯ್ದ ಘಟನೆಯೊಂದು ಅಪಹರಣ ವದಂತಿಗೆ ಕಾರಣವಾಗಿದೆ.
ಗುತ್ತಿಗಾರು ಕಾಲೇಜಿನ ವಿದ್ಯಾರ್ಥಿಯಾಗಿರುವ ಹರ್ಷಿತ್ ಎಂಬಾತನನ್ನು ಗುತ್ತಿಗಾರಿನ ಕಮಿಲ ಕ್ರಾಸ್ ನಲ್ಲಿ ಬೈಕಿನಲ್ಲಿ ಬಂದವರು ಬಲಾತ್ಕಾರವಾಗಿ ಕರೆದೊಯ್ದಿದ್ದು ಇದು ಅಪಹರಣ ಎಂದು ಪ್ರಚಾರವಾಯಿತು. ಪೋಲೀಸರಿಗೂ ಮಾಹಿತಿ ನೀಡಲಾಯಿತು. ವಿಚಾರಣೆಯ ವೇಳೆ ಗುತ್ತಿಗಾರಿನವರು ಕರೆದೊಯ್ದಿದ್ದಾರೆಂಬ ಮಾಹಿತಿ ಲಭಿಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.