ಕಾಡಾನೆಯೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕಲ್ಮಕಾರಿನಿಂದ ಇಂದು ವರದಿಯಾಗಿದೆ.
ಕಲ್ಮಕಾರಿನ ಶಿವರಾಮ ಮೆಂಟೆಕಜೆ ಎಂಬವರು ಇಂದು ಬೆಳಗ್ಗೆ ಕಾಡಿನಿಂದ ಬರುವ ನೀರಿನ ಕಸ ಬಿಡಿಸಿಕೊಂಡು ಬರಲು ಕಾಡಿಗೆ ತೆರಳಿದ್ದರು. ಆ ವೇಳೆ ಶಿವರಾಮರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಆನೆ ಸೊಂಡಿಲು ಬೀಸಿ ಅವರನ್ನು ಕೆಳಕ್ಕೆ ಬೀಳಿಸಿದೆ.
ಆ ವೇಳಗೆ ಶಿವಾಮರು ಆನೆ ದಾಳಿಯಿಂದ ತಪ್ಪಿಸಿಕೊಂಡು ಮನೆ ಕಡೆಗೆ ಓಡಿದರು.
ಆನೆ ದಾಳಿಗೆ ಅವರು ಗಾಯಗೊಂಡಿದ್ದು, ಮೂಗಿನಲ್ಲಿ ರಕ್ತ ಬರಲಾರಂಭಿಸಿತು. ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತರಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.