ಗುತ್ತಿಗಾರು :  ಜನಜಾಗೃತಿ ಸಭೆ 

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಜನಜಾಗೃತಿ ಸಭೆಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಜನಜಾಗೃತಿ ವಲಯಧ್ಯಕ್ಷರಾದ ರಾಜಾರಾಮ್ ಭಟ್ ಬೆಟ್ಟ ಸಭಾಧ್ಯಕ್ಷತೆಯನ್ನು ವಹಿಸಿದರು. ಗುತ್ತಿಗಾರು ವಲಯದಲ್ಲಿ ಜನಜಾಗೃತಿ ಸಮಿತಿ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜನಜಾಗೃತಿ ಕಾರ್ಯಕ್ರಮದ ರೂಪುರೇಷೆ, ಮುಂದಿನ ಯೋಜನೆಗಳನ್ನು ಪ್ರಾಸ್ತಾವಿಕವಾಗಿ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ವಿವರಿಸಿದರು.ಹೊಸ ಸದಸ್ಯರಾಗಿ ಕೇಶವ ಹೊಸೊಳಿಕೆ, ಬಾಬು ಗೌಡ ಅಚ್ರಪ್ಪಾಡಿ, ಶಂಕರನಾರಾಯಣ ಉಪಾಧ್ಯಯ, ಸತೀಶ್ ರಾವ್, ವಿಜಯಕುಮಾರ್ ಚಾರ್ಮಾತ, ಪರಶುರಾಮ್ ಚಿಲ್ತಡ್ಕ, ಪರಶುರಾಮ್ ಪೂಜಾರಿಕೋಡಿ, ಜಯಪ್ರಕಾಶ್ ಮೊಗ್ರ, ಮೋಹನ್ ಎರ್ದಡ್ಕ,ಶಾರದಾ ಎಂ. ಕೆ., ರಮೇಶ್ ದೇಳಂಪಾಡಿ, ಶಶಿಕಾಂತ್ ಗುಳಿಗನಮೂಲೆ, ಮನೋಹರ್ ರೈ, ರಾಧಾಕೃಷ್ಣ ಮಾವಿನಕಟ್ಟೆ, ದುರ್ಗೇಶ್ ಪಾರೆಪ್ಪಾಡಿ ಸೇರ್ಪಡೆಗೊಂಡರು.ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಯತೀಶ್ ರೈ ದುಗ್ಗಲಡ್ಕ, ಒಕ್ಕೂಟ ವಲಯಧ್ಯಕ್ಷರಾದ ಭಾಸ್ಕರ್ ರಾವ್ ಚೆನ್ನಡ್ಕ, ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ, ಸೇವಾಪ್ರತಿನಿಧಿಗಳು ಮತ್ತು ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.