ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಸರಕಾರಿ ಸಾರಿಗೆ ನೌಕರರ ಪ್ರತಿಭಟನೆ 2ನೇ ದಿನಕ್ಕೆ ಮುಂದುವರೆದಿದ್ದು, ಈ ಮುಷ್ಕರದ ಹಿನ್ನೆಲೆಯಲ್ಲಿ ಸುಳ್ಯದಲ್ಲೂ ಸರ್ಕಾರಿ ಬಸ್ಸ್ಗಳು ಇಂದು ಕೂಡಾ ಓಡಾಟ ನಡೆಸುತ್ತಿಲ್ಲ.
ಸರ್ಕಾರವು ಖಾಸಗಿ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಿದ್ದು, ಸುಳ್ಯ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರ ಸೇವೆಗೆ ಸಿದ್ಧವಾಗಿ ನಿಂತಿದೆ. ನಿನ್ನೆಯ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು ಇಂದು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಕಂಡುಬರುತ್ತಿದೆ.