Breaking News

ಕೆಯ್ಯೂರು: ಮೊಬೈಲ್ ಫೋನ್ ಸುಟ್ಟು ಹಾಕಿ ನೇಣಿಗೆ ಶರಣಾದ ಯುವಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಾಳಪ್ಪಜ್ಜನಮನೆ ತರವಾಡು ಮನೆಯ ನೇಮೋತ್ಸವ ಮೊಟಕು

ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಯುವಕನೋರ್ವ ತನ್ನ ಮೊಬೈಲ್ ಫೋನ್ ಸುಟ್ಟುಹಾಕಿ ಮನೆಯ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಕನಕಮಜಲು ಗ್ರಾಮದ ಕಾಳಪ್ಪಜ್ಜನಮನೆ ತರವಾಡು ಮನೆಯಲ್ಲಿ ಜರುಗುತ್ತಿದ್ದ ನೇಮೋತ್ಸವ ಮೊಟಕುಗೊಂಡಿರುವ ಘಟನೆ ಎ.9ರಂದು ವರದಿಯಾಗಿದೆ.
ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ವೆಂಕಟ್ರಮಣ ಗೌಡರ ಪುತ್ರ ವೃತ್ತಿಯಲ್ಲಿ ರಿಕ್ಷಾ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವರಾಜ್ (27ವರ್ಷ) ಎಂಬವರು ಎ.9ರಂದು ಮುಂಜಾನೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ,ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಶಿವರಾಜ್ ಅವರ ತರವಾಡು ಮನೆಯಾದ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕಾಳಪ್ಪಜ್ಜನಮನೆ ತರವಾಡು ಮನೆಯಲ್ಲಿ ಎ.8ರಂದು ರಾತ್ರಿ ಮತ್ತು ಎ.9ರಂದು ಹಗಲು ದೈವಗಳ ನೇಮೋತ್ಸವ ಕಾರ್ಯಕ್ರಮ ಇದ್ದ ಕಾರಣದಿಂದ ಎ.8ರಂದು ರಾತ್ರಿ ಕಾಳಪ್ಪಜ್ಜನಮನೆ ತರವಾಡು ಮನೆಯಲ್ಲಿ ನೇಮೋತ್ಸವದಲ್ಲಿ ಭಾಗಿಯಾಗಿ ರಾತ್ರಿ 12 ಗಂಟೆ ವೇಳೆಗೆ ಬೈಕಿನಲ್ಲಿ ಕೆಯ್ಯೂರಿನ ತನ್ನ ಮನೆಗೆ ತೆರಳಿದ್ದರು. ಆದರೆ ಎ.9ರಂದು ಮುಂಜಾನೆ ತನ್ನ ಮನೆಯ ಕೋಣೆಯಲ್ಲಿ ತನ್ನ ಮೊಬೈಲ್ ಫೋನ್ ಸುಟ್ಟುಹಾಕಿ ನೇಣಿಗೆ ಶರಣಾಗಿದ್ದಾರೆ. ಇದರಿಂದ ಕಾಳಪ್ಪಜ್ಜನಮನೆ ತರವಾಡು ಮನೆಯಲ್ಲಿ ಜರುಗುತ್ತಿದ್ದ ದೈವಗಳ ನೇಮೋತ್ಸವ ರದ್ದುಗೊಂಡಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.