ಸುಬ್ರಹ್ಮಣ್ಯ: ಜೇಸಿ ಸಂಸ್ಥೆಯಿಂದ ವಾಹನ ಕೊಡುಗೆ

Advt_Headding_Middle
Advt_Headding_Middle

 

 

ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಇದರ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಬೆಂಗಳೂರಿನ ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್‌ಗೆ ಟಾಟಾ ಸುಮಾ ವಾಹನವನ್ನು ಏ. 7ರಂದು ಕೊಡುಗೆಯಾಗಿ ನೀಡಲಾಯಿತು. ಅನಾಥರಿಗೆ, ವೃದ್ಧರಿಗೆ ಆಸರೆ ನೀಡುತ್ತಿರುವ ಈ ಸಂಸ್ಥೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ವಾಹನವನ್ನು ಹಸ್ತಾಂತರಿಸಿದರು. ಸುಬ್ರಹ್ಮಣ್ಯ ಜೇಸೀಸ್ ನ ನಿಕಟಪೂರ್ವಾಧ್ಯಕ್ಷ ಹೆಚ್.ಜಿ.ಎಫ್. ಮಣಿಕಂಠ ವಾಹನವನ್ನು ದಾನವಾಗಿ ನೀಡಿದರು. ಬೆಂಗಳೂರು ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಜನಸ್ನೇಹಿ ಯೋಗೀಶ್, ಜೇಸಿಯ ರಾಷ್ಟ್ರೀಯ ಸಂಯೋಜಕ ಜೆ.ಎಫ್.ಎಸ್. ರವಿಕಕ್ಕೆಪದವು, ಪೂರ್ವ ರಾಷ್ಟ್ರೀಯ ನಿರ್ದೇಶಕ ಜೇಸಿ ಪಿ.ಪಿ.ಪಿ. ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ಜೇಸೀಸ್ ನ ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್, ಮಾಸ್ಟರ್ ಪ್ಲಾನ್ ಮಾಜಿ ಸದಸ್ಯ ಲೋಲಾಕ್ಷ ಕೈಕಂಬ, ಮಾಜಿ ಗ್ರಾ.ಪಂ. ಸದಸ್ಯ ಕಿಶೋರ್ ಅರಂಪಾಡಿ, ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ವೆಂಕಟೇಶ್ ಹೆಚ್.ಎಲ್, ಗೋಪಾಲ ಎಣ್ಣೆಮಜಲು, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಅಧ್ಯಕ್ಷ ದೀಪಕ್ ನಂಬಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.