ನಾಳೆ ಗಾಂಧಿನಗರ ನವೀಕೃತ ಮಸೀದಿ ಕಟ್ಟಡ ಉದ್ಘಾಟನೆ

Advt_Headding_Middle
Advt_Headding_Middle

 

ಮುಹ್ಯದ್ದೀನ್ ಜುಮ್ಮಾ ಮಸೀದಿ ತರ್ಬಿಯತುಲ್ ಇಸ್ಲಾಂ ಜಮಾಯತ್ ಕಮಿಟಿ ಗಾಂಧಿನಗರ ನವೀಕೃತ ಜುಮ್ಮಾ ಮಸೀದಿಯ ಉದ್ಘಾಟನೆ ಸಮಾರಂಭ ಎ.11ರಂದು ಉದ್ಘಾಟನೆ ಗೊಳ್ಳಲಿದೆ. ದ.ಕ.ಜಿಲ್ಲಾ ಖಾಝಿ ಸಯ್ಯದ್ ಪಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರು ದುವಾಶಿರ್ವಚನದೊಂದಿಗೆ ವಕ್ಪ್ ನಿರ್ವಹಿಸಲಿದ್ದಾರೆ.
ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂದಪುರ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ನವೀಕೃತ ಮಸೀದಿಯನ್ನು ಉದ್ಘಾಟಿಸಲಿದ್ದಾರೆ.ಸುಬಹಿ ನಮಾಝ್ ಬಳಿಕ ಮೌಲೂದ್ ಪಾರಯಣ ನೇತೃತ್ವವನ್ನು ಅಲ್ ಹಾಜ್ ಬಿ.ಕೆ ಅಬ್ದುಲ್‌ ಖಾದರ್ ಮುಸ್ಲಿಯಾರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ ವಹಿಸಲಿದ್ದಾರೆ.
ಗಾಂಧಿನಗರ ಮಸೀದಿಯಲ್ಲಿ ಮುದರಿಸ್ ಆಗಿದ್ದ ಯಾಕುಬ್ ದಾರಿಮಿ,ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಸದಸ್ಯ ಶಾಫಿ ಸಹದಿ,ಜಿಲ್ಲಾ ವಕ್ಪ್ ಅಧಿಕಾರಿ ಹಾಜಿ ಅಬೂಭಕ್ಕರ್,ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ವಯನಾಡ್, ಅಲ್ಲದೇ ಅನೇಕ ಗಣ್ಯರು ಬಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಧ್ವಜಾರೋಹಣ ನಂತರ ಕಬರ್ ಝಿಯಾರತ್, ಸನ್ಮಾನ ಸಮಾರಂಭ, ಬುರ್ದಾ ಮಜ್ಲೀಸ್,ಧಫ್ ಕಾರ್ಯಕ್ರಮ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.