ನೀರಿನ ಸಮಸ್ಯೆ ನಿವಾರಣೆಗೆ ಡ್ಯಾಂ ನಿರ್ಮಾಣ : ಸಚಿವ ಅಂಗಾರ

Advt_Headding_Middle
Advt_Headding_Middle

ಸುಳ್ಯ ನಗರದ ಕಲ್ಲುಮುಟ್ಲು ನೀರು ಸರಬರಾಜು ಘಟಕ ಪರಿಶೀಲಿಸಿದ ಸಚಿವರು
ಸುಳ್ಯ ನಗರ ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಆಗದಂತೆ ಶಾಶ್ವತ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ನಾಗಮಟ್ಟಣ ಸೇರಿದಂತೆ ೧೨ ಕಡೆಗಳಲ್ಲಿ ಡ್ಯಾಂ ನಿರ್ಮಾಣ ಮಾಡಿ ಅಂತರ್ಜಲ ಉಳಿಸಲಾಗುವುದು. ಅಧಿಕಾರಿಗಳ ತಂಡ ಸ್ತಳ ಪರಿಶೀಲನೆ ನಡೆಸುತ್ತಿದೆ ಎಂದು ಸಚಿವ ಎಸ್.ಅಂಗಾರ ಹೇಳಿದರು.
ಇಂದು ಸುಳ್ಯ ನಗರದ ಕಲ್ಲುಮುಟ್ಲು ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರು ನಗರಕ್ಕೆ ನೀರು ಸರಬರಾಜು ಮಾಡುವ ನೀರು ಶುದ್ದೀಕರಣ ಘಟಕ, ಜಾಕ್‌ವೆಲ್ ಘಟಕ ವನ್ನು ಪರಿಶೀಲಿಸಿದ ಬಳಿಕ ಸುದ್ದಿಯೊಂದಿಗೆ ಮಾತನಾಡಿದರು.
ನಗರ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ನೀರಿನ ಮೂಲವನ್ನು ಕಾಪಾಡಿಕೊಳ್ಳಬೇಕಾಗಿದೆ. ಈಗ ಆರಂಭದಲ್ಲಿ ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ಕಲ್ಲುಮುಟ್ಲು ನೀರು ಸರಬರಾಜು ಕೇಂದ್ರದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಿ ಅದರಿಂದ ನೀರು ಲಿಫ್ಟ್ ಮಾಡುವ ವ್ಯವಸ್ಥೆಯನ್ನು ಸರಿ ಪಡಿಸಲಾಗುವುದು. ನಾಗಪಟ್ಟಣ ಸೇರಿದಂತೆ 12 ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುತ್ತೇವೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ದ.ಕ. ಜಿಲ್ಲೆಯಲ್ಲಿ ಡ್ಯಾಂ ಗಳ ನಿರ್ಮಾಣಕ್ಕೆ ೫೦೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಅದೇ ಅನುದಾನದಲ್ಲಿ ಇಲ್ಲಿಯೂ ಡ್ಯಾಂ ನಿರ್ಮಾಣ ಆಗಲಿದೆ ಎಂದು ಸಚಿವರು ಹೇಳಿದರು.
ನಾಗಪಟ್ಟಣದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ನೀರು ಶೇಖರಣೆಗೆ ನ.ಪಂ. ಸುಮಾರು ೧ ಲಕ್ಷ ರೂ ವೆಚ್ಚದಲ್ಲಿ ಗೋಣಿ ಚೀಲದಲ್ಲಿ ಮರಳು ತುಂಬಿಸಿ ಒಡ್ಡು ನಿರ್ಮಾಣ ಮಾಡಿ, ನೀರು ಶೇಖರಣೆ ಮಾಡಿದ್ದು ಅದನ್ನು ವೀಕ್ಷಣೆ ಮಾಡಿದರು. ಬಳಿಕ ನ.ಪಂ. ಅಧ್ಯಕ್ಷ ವಿನಯ ಕಂದಡ್ಕರು ನಗರದ ನೀರು ಸರಬರಾಜಿಗಾಗಿ ಹಾಕಿಕೊಂಡಿರುವ ಯೋಜನೆಗಳನ್ನು ಸಚಿವರಿಗೆ ವಿವರಿಸಿದರು. ಬಳಿಕ ಕಲ್ಲುಮುಟ್ಲು ಶುದ್ದೀಕರಣ ಕೇಂದ್ರಕ್ಕೆ ಹೋಗಿ ಅಲ್ಲಿಯೂ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನ.ಪಂ. ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ಜಿ ನಾಯ್ಕ್, ಸದಸ್ಯರುಗಳಾದ ಸುಧಾಕರ ಕುರುಂಜಿಭಾಗ್, ಸುಶೀಲ ಜಿನ್ನಪ್ಪ ಪೂಜಾರಿ, ಪ್ರವಿತಾ ಪ್ರಶಾಂತಿ, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡು ಪನ್ನೆ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.