ಅಲ್ಪಾವಧಿ, ದೀರ್ಘಾವಧಿ ಕೃಷಿ ಸಾಲ ನಿಯಮ ಈ ಹಿಂದಿನಂತೆ ರೂಪಿಸಲು ಸಚಿವರಿಗೆ ಉಬರಡ್ಕ‌ ಸಹಕಾರಿ ಸಂಘ ಮನವಿ

Advt_Headding_Middle
Advt_Headding_Middle

 

ಅಲ್ಪಾವಧಿ ಬೆಳೆ ಸಾಲ ಮತ್ತು ದೀರ್ಘಾವಧಿ, ಮಧ್ಯಮಾವಧಿ ಕೃಷಿ ಹಾಗೂ ಕೃಷಿ ಸಂಬಂಧಿಸಿದ ಸಾಲಗಳಿಗೆ ಬಡ್ಡಿ ವಿನಾಯಿತಿ ನೀಡಿ ಸರಕಾರದ ಸುತ್ತೋಲೆಯನ್ನು ಸಡಿಲಗೊಳಿಸಬೇಕೆಂದು ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ವತಿಯಿಂದ ಸಚಿವ ಅಂಗಾರರ ಮೂಲಕ ಸರಕಾರಕ್ಕೆ ಮನವಿ ಮಾಡಿದೆ.

ಅಲ್ಪಾವಧಿ ಬೆಳೆ ಸಾಲ, ಕೃಷಿ ಅಭಿವೃದ್ಧಿ ಸಾಲ, ಹೈನುಗಾರಿಕೆ ಇತ್ಯಾದಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು ಇದೀಗ ಸರಕಾರ ಕೃಷಿ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಮೇಲೆ ಕೆಲವೊಂದು ಷರತ್ತುಗಳನ್ನು ಒಳಗೊಂಡ ಸುತ್ತೋಲೆಯನ್ನು ನೀಡಿರುತ್ತಾರೆ. ಸದ್ರಿ ಸುತ್ತೋಲೆಯ ಉಲ್ಲೇಖ ನಂ.1 ರ ಪ್ರಕಾರ ಅಲ್ಪಾವಧಿ ಬೆಳೆ ಸಾಲ ಒಂದು ಕುಟುಂಬಕ್ಕೆ ಗರಿಷ್ಠ ರೂ.3.00 ಲಕ್ಷದ ವರೆಗೆ ಬಡ್ಡಿ ರಿಯಾಯಿತಿ ಸಾಲ ಅನ್ವಯವಾಗಬಹುದು. ಅಂದರೆ ಕುಟುಂಬದ ಸದಸ್ಯರು ಒಟ್ಟಾರೆ ಎಷ್ಟೇ ಸಾಲ ಪಡೆದಿದ್ದರೂ ಯಾವ ಸದಸ್ಯನು ಸಾಲದ ಗಡುವು ಮೊದಲು ಬರುತ್ತದೋ ಅಂತಹ ಸದಸ್ಯನಿಗೆ ಮೊದಲ ಮೂರು ಲಕ್ಷವರೆಗಿನ ಸಾಲಕ್ಕೆ ಮಾತ್ರ ರಾಜ್ಯ ಸರಕಾರದ ಬಡ್ಡಿ ಸಹಾಯಧನ ದೊರೆಯಲಿದೆ. ಉಳಿದ ಸದಸ್ಯನು ಸಾಲ ಹೊಂದಿದ್ದರೆ ಅಂತಹ ಕುಟುಂಬ ಸದಸ್ಯನಿಗೆ ಸರಕಾರದ ಸಹಾಯಧನ ಲಭ್ಯವಿರುವುದಿಲ್ಲ. ಮತ್ತು ದೀರ್ಘಾವಧಿ ಹಾಗೂ ಮಧ್ಯಮಾವಧಿ ಕೃಷಿ ಹಾಗೂ ಕೃಷಿ ಸಂಬಂಧಿಸಿದ ಸಾಲಗಳಿಗೆ ಸರಕಾರದ ಸುತ್ತೋಲೆಯ ಉಲ್ಲೇಖ ನಂ. 2 ರ ಪ್ರಕಾರ ಒಂದು ಕುಟುಂಬಕ್ಕೆ ರೂ.10 ಲಕ್ಷ ಸಾಲ ಅಥವಾ 2004ರಿಂದ ಈವರೆಗೆ ರೂ.4 ಲಕ್ಷ ಬಡ್ಡಿ ರಿಯಾಯಿತಿ ಪಡೆದಿದ್ದರೆ ಅಂತಹ ರೈತರು ಸರಕಾರದಿಂದ ನೀಡುವ ಶೇ.3 ರ ಬಡ್ಡಿಯಲ್ಲಿ ಸಾಲ ಪಡೆಯಲು ಅರ್ಹತೆ ಅರ್ಹತೆ ಹೊಂದಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖವಾಗಿದೆ.ಆದುದರಿಂದ ಈ ಸುತ್ತೋಲೆಯಲ್ಲಿ ನಮೂದಿಸಿರುವ ಷರತ್ತುಗಳು ರೈತರಿಗೆ ಮಾರಕವಾಗಿದೆ. ಸಾಲದ ಮೇಲಿನ ಬಡ್ಡಿ ರಿಯಾಯಿತಿ ಯೋಜನೆಯನ್ನು ಈ ಹಿಂದೆ ಇದ್ದಂತೆ ನೀಡಬೇಕಾಗಿ ತಮ್ಮಲ್ಲಿ ರಾಜ್ಯದ ರೈತರ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ನಿರ್ದೇಶಕರುಗಳಾದ ವಿಜಯಕುಮಾರ್ ಉಬರಡ್ಕ, ಹರಿಪ್ರಸಾದ್ ಪಾನತ್ತಿಲ, ಭಾಸ್ಕರ್ ರಾವ್, ಶ್ರೀಮತಿ ಶಾರದಾ ಡಿ ಶೆಟ್ಟಿ, ಶ್ರೀಮತಿ ಲೀಲಾವತಿ ಬಳ್ಳಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್, ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಚಿತ್ರಾಕುಮಾರಿ, ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಮೊದಲಾವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.