Breaking News

ಸುಳ್ಯ ಗಾಂಧಿನಗರ ನವೀಕೃತ ಜುಮ್ಮಾ ಮಸೀದಿ ಉದ್ಘಾಟನೆ

Advt_Headding_Middle

 

ಸುಳ್ಯ ಗಾಂಧಿನಗರ ನವೀಕೃತ ಜುಮಾ ಮಸ್ಜಿದ್ ಉದ್ಘಾಟನೆ ಎ.11ರಂದು ಖಾಝಿ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ‌ ಕೂರತ್ ವಕ್ಫ್ ಕರ್ಮ ನಿರ್ವಹಿಸಿದರು.
ಅಖಿಲ ಭಾರತ ಜಂಇಯ್ಯತುಲ್ ಉಲಮಾ ಹಾಗೂ ಮರ್ಕಸ್ ಕ್ಯಾಲಿಕಟ್ ಇದರ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟನೆ ನೆರವೇರಿಸಿದರು.
ಉದ್ಘಾಟನ ಸಮಾರಂಭದ ಪೂರ್ವಭಾವಿಯಾಗಿ ನಡೆದ ಬದರ್ ಮೌಲೂದ್ ಕಾರ್ಯಕ್ರಮಕ್ಕೆ ಸಮಸ್ತ ಜಂಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸಮಿತಿ ಸದಸ್ಯರಾದ ಬಿ.ಕೆ‌ ಅಬ್ದುಲ್‌ ಖಾದರ್ ಮುಸ್ಲಿಯಾರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ನೇತೃತ್ವ ವಹಿಸಿದ್ದರು.

ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಆದಂಕುಂಞ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ,ಮರ್ಕಜ್ ಕೊಆರ್ಡಿನೇಟರ್ ತನ್ವೀರ್, ಅಬ್ದುಲ್‌ ಖಾದರ್ ಮದನಿ ಪಳ್ಳಂಗೋಡು,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್,ಜಮಾಯತ್ ಕಮಿಟಿ ಮಾಜಿ ಅಧ್ಯಕ್ಷ ಕೆ.ಬಿ ಮಹಮ್ಮದ್ ಹಾಜಿ,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್, ಹಾಜಿ ಅಬ್ದುಲ್‌ ಖಾದರ್ ಕಲ್ಲಪಳ್ಳಿ,ಸಯ್ಯದ್ ಹುಸೈನ್ ತಂಙಳ್ ‌ಅದೂರ್,ಸಯ್ಯದ್ ಅಲವಿ ತಂಙಳ್, ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಹಾಪೀಳ್ ಶೌಕತ್ ಆಲಿ ಸಖಾಫಿ,ಮೂಡುಬಿದಿರೆ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಯಾಕುಬ್ ದಾರಿಮಿ,ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಖತೀಬರಾದ ಯೂನುಸ್ ಸಖಾಫಿ ವಯನಾಡ್, ಭಾಗವಹಿಸಿದರು.
ವೇದಿಕೆಯಲ್ಲಿ ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ, ಜಮಾಯತ್ ಕಮಿಟಿ ಪ್ರ.ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್,ಇಬ್ರಾಹಿಂ ಸಖಾಫಿ ಪುಂಡುರೂ,ಅನ್ಸಾರಿಯ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಜಮಾಯತ್ ಕಮಿಟಿ ಉಪಾಧ್ಯಕ್ಷ ಹಾಜಿ ಅಬ್ದುಲ್‌ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೂಸುಫ್ ಮುಸ್ಲಿಯಾರ್ ಖಿರಾಅತ್ ಪಠಿಸಿದರು.
ಅನ್ಸಾರಿಯ ಎಜುಕೇಶನ್ ಸೆಂಟರ್ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು.
ವಕ್ಪ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಕೆ.ಎಂ ಮುಸ್ತಫಾ ಸ್ವಾಗತಿಸಿದರು
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು.
ಗಾಂಧಿನಗರ ಜುಮ್ಮಾ ಮಸೀದಿ ಸಹಾಯಕ ಖತೀಬರಾದ ಶೌಕತ್ ಆಲಿ ಅಮಾನಿ ,ಕೆ.ಬಿ ಮಜೀದ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.