ಸುಳ್ಯದ ಕಾರ್‌ಸ್ಟ್ರೀಟ್‌ನಲ್ಲಿ ಮಕ್ಕಳ ಎಕ್ಸ್‌ಕ್ಲೂಸಿವ್ ವಸ್ತ್ರ ಮಳಿಗೆ ಬೇಬಿ ಝೋನ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯದ ಕಾರ್ ಸ್ಟ್ರೀಟ್ ವಿನಾಯಕ ಬಿಲ್ಡಿಂಗ್ ನಲ್ಲಿ ಪುಟಾಣಿ ಮಕ್ಕಳ ನವನವೀನ ಮಾದರಿಯ ಪ್ರತಿಷ್ಠಿತ ಬ್ರಾಂಡ್ ನಿರ್ಮಿತ ನೂತನ ವಿನ್ಯಾಸದ ಉಡುಪುಗಳು ಮತ್ತು ಮಕ್ಕಳ ಆಟಿಕೆಯ ಮಾರಾಟ ಮಳಿಗೆ ಬೇಬಿ ಝೋನ್ ಏ. 12ರಂದು  ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಪೇರಾಲು ಆಟು ಉಪ್ಪಾಪ ಸ್ವಲಾತ್ ಮಜ್ಲೀಸ್ ಸ್ಥಾಪಕ ಅಬ್ದುಲ್ಲಾ ಕುಂಞಿ ಸಂಕೇಶ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ದ.ಕ. ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಕ್ಷಯ್ ಕೆ.ಸಿ., ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ, ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕರವರು ನೂತನ ಸಂಸ್ಥೆಗೆ ಶುಭ ಹಾರೈಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ಕಮಿಟಿಯ ಅಧ್ಯಕ್ಷ ಹಾಜಿ ಆದಂ ಕಮ್ಮಾಡಿ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ತಾಲೂಕು ಎಸ್.ಡಿ.ಪಿ.ಐ. ಅಧ್ಯಕ್ಷ ಅಬ್ದುಲ್ ಕಲಾಂ, ನ.ಪಂ. ಸದಸ್ಯರುಗಳಾದ ಕೆ.ಎಸ್. ಉಮ್ಮರ್, ರಿಯಾರh ಕಟ್ಟೆಕ್ಕಾರ್, ಹಿರಿಯರಾದ ಮಹಮ್ಮದ್ ಸಂಕೇಶ್ ಅಡ್ಕಾರ್, ರಜತ್ ಅಡ್ಕಾರ್ ಕೆ.ವಿ.ಜಿ., ಆಝಾದ್ ವಾಚ್ ವರ್ಕ್ಸ್ ಮಾಲಕ ಬಾಬಾ ಹಾಜಿ, ಕಟ್ಟಡ ಮಾಲಕ ಪ್ರಸಾದ್ ಕಿರ್ಲಾಯ, ಪುರುಷೋತ್ತಮ ಬಂಗಾರಕೋಡಿ, ಮೊದೀನ್ ಫ್ಯಾನ್ಸಿ ಮೊದಲಾದವರು ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ದ.ಕ. ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಕ್ಷಯ್ ಕೆ.ಸಿ. ಹಾಗೂ ಸ್ಥಾಪನೆಗೆ ಸಹಕರಿಸಿದ ಶಿಯಾಬ್ ಕಟ್ಟೆಕ್ಕಾರ್‍ಸ್‌ರವರನ್ನು ಗೌರವಿಸಿ, ಸನ್ಮಾನಿಸಲಾಯಿತು.

 

ಸಂಸ್ಥೆಯ ಪಾಲುದಾರರಿಗೆ ಅಕ್ಷಯ್ ಕೆ.ಸಿ.ಯವರು ಪ್ರೋತ್ಸಾಹಿಸಿ ಶಾಲು ಹೊದಿಸಿದರು. ರಿಯಾಝ್ ಮತ್ತು ನವಾಝ್ ಮಾತನಾಡಿ, ಸುಳ್ಯ ತಾಲೂಕಿನಲ್ಲಿಯೇ ಮಕ್ಕಳ ಸಿದ್ಧ ಉಡುಪುಗಳ ಏಕೈಕ ವಿಶಾಲವಾದ ಮಳಿಗೆ ಇದಾಗಿದ್ದು, ಈ ಸಂಸ್ಥೆಯಲ್ಲಿ 0 ದಿಂದ 16 ವರ್ಷದ ವರಗಿನ ಗಂಡುಮಕ್ಕಳ ಮತ್ತು ಹೆಣ್ಣು ಮಕ್ಕಳ ಸಿದ್ಧ ಉಡುಪುಗಳು, ಆಟಿಕೆ ವಸ್ತುಗಳು, ನೈಟ್ ಡ್ರೆಸ್, ಟ್ರೋಲಿ, ಪಾರ್ಟಿ ಉಡುಪುಗಳು, ಆಕರ್ಷಕ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಿರುತ್ತದೆ ಎಂದು ಅವರು ತಿಳಿಸಿದರು. ದ.ಕ. ಜಿಲ್ಲಾ ವಕ್ಫ್ ಸದಸ್ಯ ಹಾಜಿ ಮುಸ್ತಫಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.