ಬಸ್ ಬಂದು ಕರೆದಾಗ ವ್ಯಾನ್‌ನಿಂದಿಂದಿಳಿದು ಓಡುವ ಪ್ರಯಾಣಿಕರು

Advt_Headding_Middle
Advt_Headding_Middle

ಖಾಸಗಿ ವಾಹನ ಚಾಲಕರಿಂದ ಕೆಎಸ್‌ಆರ್‌ಟಿಸಿ ಟಿಸಿಯ ಮೇಲೆ ಆಕ್ರೋಶ

ಸುಳ್ಯ ಬಸ್ ನಿಲ್ದಾಣದಲ್ಲಿ ಗೊಂದಲ, ಪೊಲೀಸ್ ಮಧ್ಯಪ್ರವೇಶ

 

ಸರಕಾರಿ ಬಸ್ ಚಾಲಕ -ನಿರ್ವಾಹಕ ಮುಷ್ಕರದ ಪರಿಣಾಮವಾಗಿ ಖಾಸಗಿ ಕಾರು, ವ್ಯಾನ್ ಮತ್ತು ಬಸ್‌ಗಳಿಗೆ ಸರಕಾರ ಸರಕಾರಿ ಬಸ್ ನಿಲ್ದಾಣದಲ್ಲಿ ಅವಕಾಶ ನೀಡಿದೆ.

ಇಂದು 8 ಸರಕಾರಿ ಬಸ್‌ಗಳ ಆಗಮನವಾಗಿತ್ತು. ಈ ಬಸ್‌ಗಳು ಬಂದ ಕೂಡಲೇ ಖಾಸಗಿ ಬಸ್, ವ್ಯಾನ್‌ಗಳಲ್ಲಿ ಕುಳಿತಿರುವ ಪ್ರಯಾಣಿಕರು ಅದಕ್ಕೆ ಓಡುವುದರಿಂದ ಖಾಸಗಿ ವಾಹನಗಳ ಚಾಲಕರು ಸರಕಾರಿ ಬಸ್ ಸಿಬ್ಬಂದಿಯ ಶೈಲಿಯನ್ನು ಪ್ರಶ್ನಿಸಿದರು. ಇದರಿಂದ ಸುಳ್ಯ ಬಸ್ ನಿಲ್ದಾಣದಲ್ಲಿ ಗೊಂದಲ ನಿರ್ಮಾಣವಾಯಿತು.

ಬಸ್ ನಿಲ್ದಾಣದ ಒಳಗಿಂದ ಹೊರಟ ಬಳಿಕ ಸರಕಾರಿ ಬಸ್‌ನ ನಿರ್ವಾಹಕರು ಮುಖ್ಯ ರಸ್ತೆಯ ಬದಿಗೆ ಬಂದು ಜನ ಕರೆಯುತ್ತಿದ್ದು, ನಮ್ಮ ವಾಹನಗಳಲ್ಲಿ ಕುಳಿತ ಪ್ರಯಾಣಿಕರು ಇಳಿದು ಸರಕಾರಿ ಬಸ್‌ಗೆ ಓಡುತ್ತಾರೆ. ಆದ್ದರಿಂದ ಸರಕಾರಿ ಬಸ್‌ನವರು ರಸ್ತೆ ಬದಿಯಲ್ಲಿ ಜನರನ್ನು ಕರೆಯಬಾರದು ಎಂಬುದು ಖಾಸಗಿಯವರ ವಾದ. ಆಗ ಖಾಸಗಿ ಮತ್ತು ಸರಕಾರಿ ವಾಹನಗಳ ಸಿಬ್ಬಂದಿಗಳ ನಡುವೆ ಚರ್ಚೆ ಆರಂಭವಾಯಿತು.

 

ಸಮಸ್ಯೆ ಇತ್ಯರ್ಥಕ್ಕೆ ಪೊಲೀಸರು ಮಧ್ಯಪ್ರವೇಶಿಸಿದರು. ಈಗಾಗಲೇ ಸರಕಾರಿ ಬಸ್ ನಿಲ್ದಾಣದ ಒಳಗಡೆ ೧ ತಿಂಗಳ ಕಾಲ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಆರ್‌ಟಿಒ ಅನುಮತಿ ನೀಡಿರುವುದರಿಂದ ಸರಕಾರಿ ಬಸ್ ಸಿಬ್ಬಂದಿ ರಸ್ತೆ ಬದಿಯಲ್ಲಿ ಜನ ಕರೆಯಬಾರದೆಂದು ಪೊಲೀಸರು ಹೇಳಿ ಗೊಂದಲ ನಿವಾರಿಸಿದರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.