ಬಲೆಕ್ಕಳ ಶಿವರಾಮ ಭಟ್ ನಿಧನ

Advt_Headding_Middle
Advt_Headding_Middle

ಬಳ್ಪ ಗ್ರಾಮದ  ಬಲೆಕ್ಕಳ ಮನೆತನದ ಹಿರಿಯರಾದ ಬಿ.ಶಿವರಾಮ ಭಟ್ (90) ಏ.12ರಂದು ಬಳ್ಪ ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರಿ ಹಾಗೂ ನಾಲ್ವರನ್ನು ಪುತ್ರರನ್ನು ಅಗಲಿದ್ದಾರೆ.
ಆರಂಭದಲ್ಲಿ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ವಾಸವಿದ್ದ ಇವರುರು ಕಳೆದ 45 ವರ್ಷಗಳಿಂದ ಬಳ್ಪದಲ್ಲಿ ವಾಸವಾಗಿದ್ದರು. 1960 ರ ದಶಕದಲ್ಲಿ ಮಂಡೆಕೋಲು ಗ್ರಾಮ ಪಂಚಾಯಿತಿ ಸದಸ್ಯರಾಗಿ, ಬಳಿಕ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಮಂಡೆಕೋಲು- ಅಡೂರು ಅಂತಾರಾಜ್ಯ ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಡೆಕೋಲು ವ್ಯವಸಾಯ ಸೇವಾ ಸಂಘದ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮಂಡೆಕೋಲು ಗ್ರಾಮದ ಕಲ್ಕಡ್ಕ ಪೆರಜ ಕಿರಿಯ ಪ್ರಾಥಮಿಕ ಶಾಲೆ ಮತ್ತು ಮಂಡೆಕೋಲಿನ ಕನ್ಯಾನ ಕಿರಿಯ ಪ್ರಾಥಮಿಕ ಶಾಲೆ ನಿರ್ಮಾಣದ ರೂವಾರಿಗಳಲ್ಲಿ ಒಬ್ಬರಾಗಿದ್ದ ಶಿವರಾಮ್ ಭಟ್ ಅವರು ಮಂಡೆಕೋಲು ಹಾಗೂ ಬಳ್ಪದಲ್ಲಿ ಪ್ರಗತಿಪರ ಕೃಷಿಕರಾಗಿಯೂ ಜನಾನುರಾಗಿಯಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.