ಪಂಜ : ಅರ್ಧ ಏಕಾಹ ಭಜನೆ, ದೀಪ ಪ್ರಜ್ವಲನೆ

Advt_Headding_Middle
Advt_Headding_Middle

 

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಭಜನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಭಜನೋತ್ಸವ -2021 ಅರ್ಧ ಏಕಾಹ ಭಜನಾ ಕಾರ್ಯಕ್ರಮಕ್ಕೆ ಎ.14.ರಂದು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ದೀಪ ಪ್ರಜ್ವಲನೆ ಮಾಡಿದರು.ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಆರಂಭಗೊಂಡಿದ್ದು ಸೂರ್ಯಾಸ್ತದವರೆಗೆ ಜರುಗಲಿದೆ.

ಈ ಸಂದರ್ಭ ಶ್ರೀ ಶಾರದೋತ್ಸವ ಸಮಿತಿ ಪೂರ್ವಾಧ್ಯಕ್ಷ ಕೆ ಕೃಷ್ಣ ವೈಲಾಯ,ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ,ಭಜನೋತ್ಸವ ಸಮಿತಿ .ಅಧ್ಯಕ್ಷ ಕುಸುಮಾಧರ ಕೆಮ್ಮೂರು , ಕೋಶಾಧ್ಯಕ್ಷ ಜಯರಾಮ ಕೋಟಿಯಡ್ಕ, ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಮಹಾಲಿಂಗ ‌ಸಂಪ, ಶ್ಯಾಮ ಕೃಷ್ಣನಗರ, ನಾರಾಯಣ ಪಂಜ,ಕುಶಾಲಪ್ಪ ಗೌಡ,
ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್ , ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ,ಭಜನಾ ಮಂಡಳಿ ಸದಸ್ಯರು,ಭಜನೋತ್ಸವ ಸಮಿತಿ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು. ಸಂಜೆ  ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮಂಗಳಾರತಿ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಸಮಾರೋಪ ಸಮಾರಂಭದಲ್ಲಿ ಭಜನೋತ್ಸವ ಸಮಿತಿ ಅಧ್ಯಕ್ಷ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಶಾರದಾ ಸಮಿತಿ ಪೂರ್ವಾಧ್ಯಕ್ಷ ಕೆ. ಕೃಷ್ಣ ವೈಲಾಯ, ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಉಪಸ್ಥಿತರಿರುವರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.