ಯುಗಾದಿ

Advt_Headding_Middle
Advt_Headding_Middle

 

ಹಲವಾರು ವರ್ಷಗಳು ಕಳೆದರೂ…
ಯುಗಾದಿ ಮತ್ತೆ ಮರಳಿ ಬರುತ್ತಿದೆ…
ಹೊಸ ವರ್ಷಕ್ಕೆ ಹೊಸ ಹುರುಪನ್ನು ತರುತ್ತಿದೆ…
ಸಂಭ್ರಮ,ಸಡಗರದ ಆಚರಣೆ ಇದಾಗಿದೆ…

ಹೊಸ ಚೈತನ್ಯವ ರೂಪಿಸಿಹುದು…
ಗಿಡಮರಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿಹುದು…
ಕೋಗಿಲೆಯ ಇಂಪಾದ ಹಾಡು ಕೇಳಿಸುತ್ತಿಹುದು…
ಮನೆಗಳು ತೋರಣಗಳಿಂದ ಅಲಂಕೃತಗೊಂಡಿಹುದು…

ಮುಂಜಾನೆ ಅಭ್ಯಂಜನ ಸ್ನಾನ ಮುಗಿಸಿ…
ಹೊಸ ಉಡುಪುಗಳನ್ನು ಧರಿಸಿ…
ಅಂಗಳದಲ್ಲಿ ರಂಗೋಲಿಯ ಬಿಡಿಸಿ…
ತಯಾರಿಸೋಣ ಪ್ರಸಾದವ ಬೇವು ಬೆಲ್ಲವನ್ನು ಬೆರೆಸಿ…

ಕಹಿಯಾದ ಘಟನೆಗಳನ್ನು ಮರೆತು…
ಸಿಹಿಯಾದ ಕ್ಷಣಗಳನ್ನು ನೆನಪಿಸಿಕೊಂಡು…
ಕಷ್ಟದ ಪರಿಸ್ಥಿತಿಯನ್ನು ಎದುರಿಸಿಕೊಂಡು…
ಮುಂದೆ ಸಾಗೋಣ ಬೇವು ಬೆಲ್ಲವ ಸಮವಾಗಿ ತೆಗೆದುಕೊಂಡು..

ವಿಭಿನ್ನ ಹಂತಗಳಿಹುದು ಜೀವನದಲ್ಲಿ…
ಹೊಸತನವನ್ನು ಕಾಣುವ ಈ ಬದುಕಿನ ಪಥದಲ್ಲಿ…
ಸಿಹಿಯಾದ ಕನಸುಗಳಿಗೆ ಬೆಳಕನ್ನು ಚೆಲ್ಲಿ…
ಕಹಿ ಸಿಹಿ ಸಮವಾಗಿರಲಿ ನಮ್ಮೆಲ್ಲರ ಬಾಳಿನಲ್ಲಿ…

✍️ ಸೌಮ್ಯ.ಸಿ.ಡಿ.ಎಲಿಮಲೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.