Breaking News

ಪಂಜ , ಪಂಬೆತ್ತಾಡಿ ಪರಿಸರದ ಚಿತ್ರಣವನ್ನೇ ಬದಲಿಸಿದೆ ಗಾಳಿ ಮಳೆ

Advt_Headding_Middle

 

ಪಂಜ ಪಂಬೆತ್ತಾಡಿ ಪರಿಸರದಲ್ಲಿ ಎ.14. ರಂದು ಸಂಜೆ ಬಾರಿ ಗಾಳಿ ಮಳೆಯಾಗಿದ್ದು ಅನೇಕ ಮನೆಗಳಿಗೆ ಮರ ಉರುಳಿದೆ ಸಾವಿರಾರು ಅಡಿಕೆ, ರಬ್ಬರ್ ಮರಗಳು ಧರೆಗೆ ಉರುಳಿ ಕೃಷಿಕರು ಕಂಗೆಟ್ಟಿದ್ದಾರೆ. ಅನೇಕ ಕಡೆ ಮರ ಉರುಳಿ ರಸ್ತೆ ಸಂಚಾರ ಕೂಡ ಬಂದಾಗಿತ್ತು. ಎಲ್ಲೆಡೆ ಮರ, ಗೆಲ್ಲುಗಳು ರಾಶಿ ಕಾಣಸಿಗುತ್ತಿದ್ದು ಇಲ್ಲಿಯ ಚಿತ್ರಣವೇ ಬದಲಾಗಿದೆ.

ಅನೇಕ ಕಡೆ ವಿದ್ಯುತ್ಯು ತಂತಿ ಕಂಬಗಳ ಮೇಲೆ ಮರಗಳು
ಉರುಳಿ ನೂರಕ್ಕೂ ಮಿಕ್ಕಿ ವಿದ್ಯುತ್ ಕಂಬ ನಾಶವಾಗಿದೆ. ಪಂಜದ ಕೃಷ್ಣನಗರ ಕೂತ್ಕುಂಜ ಗ್ರಾಮದ ದಾಮೋದರ ಬೆಳ್ಚಪಾಡ ಎಂಬವರ ಮನೆ ಮೇಲೆ ಹಲಸಿನ ಮರದ ಭಾರಿ ಗಾತ್ರದ ಗೆಲ್ಲೊಂದು ಬಿದ್ದು ಮನೆ ಸಂಪೂರ್ಣ ಜಖಂ ಗೊಂಡಿದೆ. ಈ ಸಂದರ್ಭ ದಾಮೋದರ ಪತ್ನಿ ಸುಗಂಧಿ ಮನೆಯೊಳಗಿದ್ದು ಪವಾಡ ಸದೃಶವಾಗಿ ಪಾರಾಗಿದ್ದಾರೆ. ದಾಮೋದರ ರವರ ಕೂಲಿ ಕೆಲಸದಿಂದಲೇ ಜೀವನ ಸಾಗುತ್ತಿದ್ದು, ಬೇರೆ ಯಾವುದೇ ಅವರಿಗೆ ಆದಾಯದ ಮೂಲವಿಲ್ಲ. ಮನೆ ಸಂಪೂರ್ಣ ಜಖಂಗೊಂಡಿದ್ದು ಅವರ ಕುಟುಂಬ ಕಂಗೆಟ್ಟಿದ್ದು ಜನಪ್ರತಿನಿಧಿಗಳು ಇಲಾಖೆಯವರು ಗಮನಹರಿಸಿ ಸೂಕ್ತ ಪರಿಹಾರ ದೊರಕಿಸಬೇಕಾಗಿದೆ. ಪಂಬೆತ್ತಾಡಿ ಗ್ರಾಮದ ಕರಿಕಳ ಶೇಷಪ್ಪ ಗೌಡ ಮನೆಯ ಮೇಲೆ ಭಾರಿ ಗಾತ್ರದ ಕೀಳಲು ಹೋಗಿ ಮರವೊಂದು ಉರುಳಿ ಮನೆಗೆ ಭಾಗಶಃ ಹಾನಿಯಾಗಿದೆ. ಅಲ್ಲೇ ಸಮೀಪದ ಪಂಬೆತ್ತಾಡಿ ಗ್ರಾಮದ ಚಿದಾನಂದ ರವರ ಮನೆ ಮೇಲೆ ರಬ್ಬರ್ ಮರಗಳು ಉರುಳಿ ಬಿದ್ದು ಹಾನಿಯಾಗಿದೆ. ಪಂಜ ದೇವಳದ ಗರಡಿ ಬೈಲು ಮೂಲ ನಾಗನ ಕಟ್ಟೆಗೆ ಮರ ಬಿದ್ದು ಹಾನಿಯಾಗಿದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡ ಅನೇಕ ಕಡೆ ಮರಗಳನ್ನು ತೆರವು ಗೊಳಿಸುವ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎ.14 ರಂದು ರಾತ್ರಿ
ಪಂಬೆತ್ತಾಡಿ ಗ್ರಾಮದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕಳ, ರಜೀತ್ ಭಟ್ ಪಂಜ ಬೀಡು ಹಾನಿಯಾದ ಪ್ರದೇಶದಲ್ಲಿ ಭೇಟಿ ನೀಡಿ ಊರವರ ಸಹಕಾರದೊಂದಿಗೆ ಮರಗಳ ತೆರವು ಗೊಳಿಸಲು ಸಹಕರಿಸಿದರು. ಮೆಸ್ಕಾಂ ಇಲಾಖೆ ಯರು ವಿದ್ಯುತ್ ಲೈನ್ ದುರಸ್ತಿ ಯಲ್ಲಿ ನಿರತರಾಗಿದ್ದಾರೆ. ಹಾನಿಯಾದ ಮನೆಗಳಿಗೆ ಕಂದಾಯ ಇಲಾಖೆಯವರು, ಗ್ರಾಮ ಪಂಚಾಯತ್ ನವರು ಭೇಟಿ ನೀಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.