ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಸು ಹಬ್ಬದ ಅಂಗವಾಗಿಚಿಕ್ಕ ರಥೋತ್ಸವ

Advt_Headding_Middle
Advt_Headding_Middle

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಎ. 14 ರಂದು ಬಿಸು ಹಬ್ಬದ ಅಂಗವಾಗಿ ಚಿಕ್ಕ ರಥೋತ್ಸವ ನೆರವೇರಿತು.
ದೇವಸ್ಥಾನದ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಬಿಸು ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು.
ಮುಂಜಾನೆ ಶ್ರೀ ದೇವಳದ ಗರ್ಭಗೃಹದ ಮುಂಭಾಗದಲ್ಲಿ ವಿಷು ಕಣಿಯನ್ನು ಇಡಲಾಯಿತು. ಬಳಿಕ ಶ್ರೀ ದೇವರಿಗೆ ವಿಷುಕಣಿ ದರ್ಶನ ನಡೆಯಿತು.ನಂತರ ಶ್ರೀ ದೇವರ ಹೊರಾಂಗಣ ಉತ್ಸವ ನಡೆದು ರಾಜಬೀದಿಯಲ್ಲಿ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ವಿಷುಹಬ್ಬದ ಅಂಗವಾಗಿ ಚಿಕ್ಕರಥೋತ್ಸವ ನೆರವೇರಿತು.ರಥೋತ್ಸವದ ಬಳಿಕ ಶ್ರೀ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು. ಪ್ರತಿದಿನ ಮುಂಜಾನೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ನಡೆಯುವ ನಿತ್ಯಪೂಜೆ ಮತ್ತು ಬೆಳಗಿನ ಮಹಾಪೂಜೆಯು ಉತ್ಸವದ ಬಳಿಕ ನಡೆಯಿತು. ವಿಷುಕಣಿಗೆ ಪೂಜೆ ನೆರವೇರಿದ ನಂತರ ಶ್ರೀ ದೇವರ ದರುಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ನಂತರ ಇತರ ಸೇವೆಗಳು ಆರಂಭವಾಯಿತು.
ಎ.13 ರಂದು ಶ್ರೀ ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯ ಪ್ರಕಾರವಾಗಿ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಯಿತು.ಈ ನಿಮಿತ್ತ ರಾತ್ರಿ ಯುಗಾದಿ ಉತ್ಸವ ನೆರವೇರಿತು. ಆರಂಭದಲ್ಲಿ ಬಂಡಿ ಉತ್ಸವ,ಪಾಲಕಿ ಉತ್ಸವ, ತೊಟ್ಟಿಲು ಪೂಜೆ ನೆರವೇರಿತು. ನಂತರ ಪಂಚಾಂಗ ಶ್ರವಣ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.