ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಹಾಗೂ ಕನಕದಾಸ ಮಕ್ಕಳ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ

Advt_Headding_Middle

ನೆಲ್ಯಾಡಿಯ ದೋಂತಿಲದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಎ. 13 ರಂದು ಸುಳ್ಯದ ದೀಪಾಂಜಲೀ ಮಹಿಳಾ ಭಜನಾ ಮಂಡಳಿ, ಶಾಂತಿನಗರ ಹಾಗೂ ಕನಕದಾಸ ಮಕ್ಕಳ ಭಜನಾ ಮಂಡಳಿ, ಕನಕಮಜಲು- ಇವರ ವತಿಯಿಂದ ಭಜನಾ ಸಂಕೀರ್ತನಾ ಸೇವೆ ಜರುಗಿತು.
ಅದೇ ದಿನ ನೆಲ್ಯಾಡಿಯ ಕುಂಡಡ್ಕ ಮನೆಯ ಸದಾನಂದ ಹಾಗೂ ಶ್ರೀಮತಿ ಬೇಬಿ ಸದಾನಂದರವರ ಮನೆಯಲ್ಲಿ ದೀಪಾಂಜಲೀ ಮಹಿಳಾ ಭಜನಾ ಮಂಡಳಿ ಶಾಂತಿನಗರ, ಸುಳ್ಯ ಹಾಗೂ ಕನಕದಾಸ ಮಕ್ಕಳ ಭಜನಾ ಮಂಡಳಿ, ಕನಕಮಜಲು ಇವರ ವತಿಯಿಂದ ಭಜನಾ ಸಂಕೀರ್ತನಾ ಸೇವೆ ಹಾಗೂ ಕರ್ತವ್ಯದಿಂದ ನಿವೃತ್ತಿ ಹೊಂದಿದ ಯೋಧ ಮಧುಕುಮಾರ್ ರವರಿಗೆ ಅಭಿನಂದನೆ ಸಮಾರಂಭವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಜಯಮ್ಮ ಚೆಟ್ಟಿಮಾಡ, ಶ್ರೀಮತಿ ಕಮಲಾ ಬಾಲಚಂದ್ರ, ಶ್ರೀಮತಿ ರಮಾ ವೈ.ಕೆ ರವರು ವೀರ ಯೋಧ ಮಧುಕುಮಾರ್ ದಂಪತಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಕು.ಆಕಾಂಕ್ಷಾ, ಭಾನವಿಕೃಷ್ಣ, ವಿಷ್ಣುಪ್ರಿಯ ಪ್ರಾರ್ಥಿಸಿದರು. ದೀಪಾಂಜಲೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ರವರು ಸನ್ಮಾನ ಪತ್ರ ವಾಚಿಸಿದರು.
ಶ್ರೀಮತಿ ಹೇಮಲತಾ ಗಣೇಶ್ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಗೌಡ ಕುಂಡಡ್ಕ, ಶ್ರೀಮತಿ ಬೇಬಿ ಸದಾನಂದ, ಶ್ರೀಮತಿ ಹೇಮಲತಾ ದೇಂಗೋಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.