ವೆಂಕಟ್ ವಳಲಂಬೆ ಕಾರು ಪಲ್ಟಿ : ಅಪಾಯದಿಂದ ಪಾರು

Advt_Headding_Middle
Advt_Headding_Middle

 


ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆಯವರ ಕಾರು ಸುಳ್ಯದ ಓಡಬಾಯಿ ಎಂಬಲ್ಲಿ ಬ್ರೇಕ್ ಜಾಮ್ ಆಗಿ ಪಲ್ಟಿಯಾದ ಪರಿಣಾಮವಾಗಿ ವಳಲಂಬೆಯವರು ಮತ್ತು ಅವರ ಜತೆಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೆಂಕಟ್ ದಂಬೆಕೋಡಿಯವರು ಅಲ್ಪ ಸ್ವಲ್ಪ ಗಾಯಗೊಂಡು ದೊಡ್ಡ ಅಪಾಯದಿಂದ ಪಾರಾದರು.
ಅವರಿಬ್ಬರೂ ಕುಕ್ಕುಜಡ್ಕದಲ್ಲಿ ನಡೆದ ಸಡಕ್ ಕಾಮಗಾರಿಯ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ , ಆಲೆಟ್ಟಿಯಲ್ಲಿ ನಡೆಯಲಿದ್ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾರಲ್ಲಿ ಬರುತ್ತಿದ್ದರು. ಒಳ್ಳೆಯ ಮಳೆ ಬರುತ್ತಿದ್ದು , ಓಡಬಾಯಿ ಸಮೀಪ ಎದುರಿಂದ ರಿಕ್ಷಾವೊಂದು ಬರುತ್ತಿರುವುದನ್ನು ಕಂಡು ವೆಂಕಟ್ ರವರು ಕಾರಿಗೆ ಬ್ರೇಕ್ ಹಾಕಿದರು. ಆಗ ಬ್ರೇಕ್ ಜಾಮ್ ಆಗಿ ಕಾರು ನಾಲ್ಕು ಪಲ್ಟಿ ಹೊಡೆಯಿತೆಂದು ತಿಳಿದು ಬಂದಿದೆ. ಗಾಯಗೊಂಡಿರುವ ವೆಂಕಟಧ್ವಯರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.