ಆಲೆಟ್ಟಿ: ನಾಗಪಟ್ಟಣ- ನಾರ್ಕೋಡು- ಕಟ್ಟೆಕ್ಕಳ- ಎಲಿಕ್ಕಳ ರಸ್ತೆ ಸಡಕ್ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ

Advt_Headding_Middle
Advt_Headding_Middle

ಸಚಿವರಿಂದ ಹಂತ ಹಂತದಲ್ಲಿ ಉಳಿದ ರಸ್ತೆ ಅಭಿವೃದ್ಧಿ ಪಡಿಸುವ ಭರವಸೆ

 

ಆಲೆಟ್ಟಿ ಗ್ರಾಮದ ನಾಗಪಟ್ಟಣ ನಾರ್ಕೋಡು ಕಟ್ಟೆಕ್ಕಳ ಎಲಿಕ್ಕಳ ಸಂಪರ್ಕದ ರಸ್ತೆ ಅಭಿವೃದ್ಧಿಯ ಕಾಮಗಾರಿಗೆ ಪ್ರಧಾನ ಮಂತ್ರಿಯವರ ಗ್ರಾಮ ಸಡಕ್ ಯೋಜನೆಯಲ್ಲಿ ರೂ.6.89 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಕೆಲಸಕ್ಕೆ ಏ.16 ರಂದು ಮೀನುಗಾರಿಕೆ ಬಂದರು ಸಚಿವರಾದ ಎಸ್. ಅಂಗಾರ ಹಾಗೂ ಮಂಗಳೂರು ಸಂಸದ ಭಾ.ಜ.ಪ.ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿ ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು . ಬಳಿಕ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿ “ಆಲೆಟ್ಟಿಯ ಮುಖ್ಯ ರಸ್ತೆಯನ್ನು ನಾರ್ಕೋಡು ವರೆಗೆ ಅಭಿವೃದ್ಧಿ ಪಡಿಸುವ ಪ್ರಥಮ ಹಂತದ ಕಾಮಗಾರಿಯ ಕೆಲಸ ಶೀಘ್ರ ಪ್ರಾರಂಭಗೊಳ್ಳಲಿದೆ. ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯಾದ ಈ ರಸ್ತೆಯನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಸರ್ವ ಋತು ರಸ್ತೆಯನ್ನಾಗಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು. “
” ಪ್ರಧಾನ ಮಂತ್ರಿಯವರ ಕನಸಿನಂತೆ
ಗ್ರಾಮೀಣ ಭಾಗದ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಡಕ್ ಯೋಜನೆಯನ್ನು ಈ ರಸ್ತೆಗೆ ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾಪಿಸಿದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ,ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ಎ.ಪಿ.ಯಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ನ.ಪಂ.ಮಾಜಿ ಅಧ್ಯಕ್ಷ ಎನ್. ಎ.ರಾಮಚಂದ್ರ, ಸೊಸೈಟಿ ಉಪಾಧ್ಯಕ್ಷ ಕರುಣಾಕರ ಹಾಸ್ಪಾರೆ ಉಪಸ್ಥಿತರಿದ್ದರು. ಕರುಣಾಕರ ಹಾಸ್ಪಾರೆ ಸ್ವಾಗತಿಸಿದರು. ಪಂ.ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು. ಆಲೆಟ್ಟಿ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರು ಹಾಗೂ ಅಟೋ ಚಾಲಕ ಮಾಲಕರು ಭಾಗವಹಿಸಿದರು. ಈ ಸಂದರ್ಭ ಪಂಚಾಯತ್ ವತಿಯಿಂದ ಗಡಿಪ್ರದೇಶ ಕಲ್ಲಪಳ್ಳಿ ರಸ್ತೆ ಕಾಂಕ್ರೀಟಿಕರಣಕ್ಕೆ ಅನುದಾನ ಒದಗಿಸುವ ಬಗ್ಗೆ ಮನವಿ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.