ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle
Advt_Headding_Middle

 

ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆಯು ಏ.17 ರಂದು ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಪಂ.ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ಪಂ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿ.ಡಿ.ಒ.ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ಎ.ಜಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕಳೆದ ಸಭೆಯ ನಿರ್ಣಯವನ್ನು ಪಿಹಡಿ.ಒ.ಮಂಡಿಸಿದರು.
ಸಾಮಾನ್ಯ ಸಭೆಯ ನೋಟೀಸು ಕಳಹಿಸಿಲ್ಲ ಯಾಕೆ ? ಸಭೆ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬೇಕು.ಸದಸ್ಯರು ಬಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಗೀತಾ ಕೋಲ್ಚಾರು ತಿಳಿಸಿದರು. ಕಳೆದ ಸಭೆಯ ನಿರ್ಣಯ ಪ್ರತಿ ಸದಸ್ಯರಿಗೆ ನೀಡಬೇಕು. ಪಂಚಾಯತ್ ನಿಂದ ಮಾಡುವ ಅಭಿವೃದ್ಧಿ ಕೆಲಸ ಆಯಾಯ ವಾರ್ಡಿನ ಸದಸ್ಯರ ಗಮನಕ್ಕೆ ತರುವ ಕೆಲಸವಾಗಬೇಕು ಎಂದು ಧರ್ಮಪಾಲ ತಿಳಿಸಿದರು. ನಾಗಪಟ್ಟಣ ಪಂಚಾಯತ್ ಕಟ್ಟಡದ ಅಂಗಡಿ ಕೋಣೆಯ ಬಾಡಿಗೆ ಪರಿಷ್ಕರಣೆ 11 ತಿಂಗಳ ಅವಧಿಯ ನಂತರ ಕೈಗೊಳ್ಳುವ ನಿರ್ಣಯ ಮಾಡಿ ಎಂದು ಮುತ್ತಪ್ಪ ಪೂಜಾರಿ ತಿಳಿಸಿದರು. ಸೋಲಾರ್ ದೀಪ ಅಳವಡಿಸಿ ಒಂದು ವರ್ಷದಲ್ಲೇ ಕೆಟ್ಟು ಹೋಗಿದೆ. ದುರಸ್ತಿ ಪಡಿಸುವ ಸಂದರ್ಭ ವಾರ್ಡಿನ ಸದಸ್ಯರ ಗಮನಕ್ಕೆ ತಂದು ಮಾಡಬೇಕು. ಮುಂದಿನ ಅವಧಿಯಲ್ಲಿ ಬೀದಿ ದೀಪ ಅಳವಡಿಸಲು ಟೆಂಡರ್ ಕರೆಯುವಂತಾಗಬೇಕು ಎಂದು ಸುದೇಶ್ ಸೂಚಿಸಿದರು. ಒಂದು ವರ್ಷದ ಅವಧಿಗೆ ಟೆಂಡರ್ ಮಾಡುವ ಬಗ್ಗೆ ಹಾಗೂ ಕೆಲವು ಕಡೆಗಳಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪ ಉರಿಯುತ್ತಿರುವುದು ಕಂಡು ಬರುತ್ತಿದೆ. ವಾರ್ಡಿನಲ್ಲಿರುವ ಸದಸ್ಯರು ಇದರ ಬಗ್ಗೆ ಗಮನಹರಿಸುಬೇಕು ಎಂದು ಅಧ್ಯಕ್ಷರು ಉಲ್ಲೇಖಿಸಿದರು. ಬೀದಿ ದೀಪ ಅಳವಡಿಸುವಾಗ ಹತ್ತಿರದ ಮನೆಯವರಲ್ಲಿ ಅವಶ್ಯಕತೆಯ ಕುರಿತು ವಿಚಾರಿಸಿ ಅಳವಡಿಸುವುದು ಉತ್ತಮ ಎಂದು ಸತ್ಯ ಪ್ರಸಾದ್ ಪ್ರಸ್ತಾಪಿಸಿದರು. ರಸ್ತೆ ಬದಿ ಬಸ್ ತಂಗುದಾಣ ನಿರ್ಮಿಸುವ ಸಂದರ್ಭ ಜಾಗ ಪರಿಶೀಲಿಸಿ ಅಗತ್ಯ ಇದ್ದಲ್ಲಿ ನಿರ್ಮಿಸಬೇಕು. ಇಲ್ಲವಾದಲ್ಲಿ ರಸ್ತೆ ಅಗಲೀಕರಣ ವೇಳೆ ತೆರವು ಗೊಳಿಸುವ ಸಾಧ್ಯತೆ ಇದೆ ಎಂದು ಚಂದ್ರಕಾಂತ್ ಪ್ರಸ್ತಾಪಿಸಿದರು. ಕಲ್ಲಪಳ್ಳಿ ಬಾಟೋಳಿ ಗಡಿಪ್ರದೇಶದಲ್ಲಿ ತಪಾಸಣಾ ಕೇಂದ್ರ ತೆರೆಯಲಾಗಿದೆ. ಅಲ್ಲಿ ಉಳಿದುಕೊಳ್ಳುವ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯದ ಅವಶ್ಯಕತೆ ಇದೆ ಎಂದು ಸತ್ಯ ಕುಮಾರ್ ಪ್ರಸ್ತಾಪಿಸಿದರು. ಈ ಬಗ್ಗೆ ತಾಲೂಕು ಪಂಚಾಯತ್ ಅಥವಾ ಜಿ.ಪಂ.ಗೆ ಪತ್ರ ಬರೆದು ಬೇಡಿಕೆ ಇರಿಸುವುದು ಉತ್ತಮ ಎಂದು ಶಿವಾನಂದರು ತಿಳಿಸಿದರು. ಅರಂಬೂರು ಭಾಗದಲ್ಲಿ ಕೆಲವು ಮನೆಯವರು ಕೊಳಚೆ ನೀರನ್ನು ನದಿಗೆ ಹರಿಯಲು ಬಿಡುತ್ತಿದ್ದಾರೆ ಈ ಬಗ್ಗೆ ಪಿ.ಡಿ.ಒ.ರವರು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ರತೀಶನ್ ತಿಳಿಸಿದರು. ತೆರಿಗೆ ಸಂಗ್ರಹ ಎಷ್ಟಾಗಿದೆ, ಯಾವ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂದು ಮುತ್ತಪ್ಪ ರವರು ಪ್ರಶ್ನಿಸಿದರು. ದೊಡ್ಡ ಗ್ರಾಮವಾದ ಕಾರಣ ಶೇ.100 ಸಂಗ್ರಹವಾಗಿಲ್ಲ, ಶೇ 86% ಸಂಗ್ರಹ ಮಾಡಲಾಗಿದೆ ಎಂದು ಪಿ.ಡಿ.ಒ.ತಿಳಿಸಿದರು. ದೋಣಿಮೂಲೆ ಮತ್ತು ನೆಡ್ಚಿಲು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಇದಕ್ಕೆ ತಕ್ಷಣ ಅನುದಾನ ಒದಗಿಸುವ ಮೂಲಕ ಪರಿಹಾರ ಒದಗಿಸಿಕೊಡಬೇಕೆಂದು ಶಶಿಕಲಾ ರವರು ಬೇಡಿಕೆ ಇರಿಸಿದರು.
ಪಂಚಾಯತ್ ನೀರಿನ ಬಿಲ್ಲು ಸಂಗ್ರಹ ಮಾಡದೇ ಕಳೆದ ಎರಡು ಮೂರು ವರ್ಷಗಳಿಂದ ಕೆಲವು ಭಾಗದ ಮನೆಯಿಂದ ನೀರಿನ ಬಿಲ್ಲು ಸಂಗ್ರಹ ಆಗಿಲ್ಲ. ಇದರಿಂದ ಪಂಚಾಯತ್ ಗೆ ನಷ್ಟ. ಅಲ್ಲದೇ ಒಮ್ಮೆಗೆ ಪಾವತಿ ಮಾಡುವವರಿಗೆ ಕಷ್ಟ ಸಾಧ್ಯ. ತಕ್ಷಣ ನೀರಿನ ಬಿಲ್ಲು ಸಂಗ್ರಹಕ್ಕೆ ನೇಮಕಾತಿ ಮಾಡಬೇಕು ಅಥವಾ ದ್ವಿಚಕ್ರ ವಾಹನ ತಿಳಿದಿರುವ ಸಿಬ್ಬಂದಿಗೆ ಜವಬ್ದಾರಿ ವಹಿಸಬೇಕು.2 ತಿಂಗಳಿಗೊಮ್ಮೆ ಪ್ರತೀ ಮನೆಯ ಮೀಟರ್ ರೀಡ್ ಮಾಡುವಂತೆ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅಧಿಕಾರಿಯವರಿಗೆ ಒತ್ತಾಯಿಸಿದರು. ಸದಸ್ಯರುಗಳಾದ ಸತ್ಯ ಕುಮಾರ್ ಆಡಿಂಜ, ಶಾಂತಪ್ಪ ಬಡ್ಡಡ್ಕ, ಶಿವಾನಂದ ರಂಗತ್ತಮಲೆ, ಸುದೇಶ್ ಅರಂಬೂರು, ರತೀಶನ್ ಅರಂಬೂರು, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯ ಪ್ರಸಾದ್ ಗಬ್ಬಲ್ಕಜೆ, ಚಂದ್ರಕಾಂತ ನಾರ್ಕೋಡು, ಧರ್ಮಪಾಲ ಕೊಯಿಂಗಾಜೆ, ಶಂಕರಿ ಕೊಲ್ಲರಮೂಲೆ, ಗೀತಾ ಕೋಲ್ಚಾರು, ಕುಸುಮ ಬಿಲ್ಲರಮಜಲು, ಮೀನಾಕ್ಷಿ ಕುಡೆಕಲ್ಲು, ವೀಣಾವಸಂತ ಆಲೆಟ್ಟಿ, ವೇದಾವತಿ ನೆಡ್ಚಿಲು, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ಅನಿತಾ ಎಸ್. ಅರಂಬೂರು, ಕಮಲ ನಾಗಪಟ್ಟಣ ರವರು ಉಪಸ್ಥಿತರಿದ್ದರು.ಪಂ.ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.