ಕಾನೂನು ಕಾಲೇಜಿನ ಸ್ಕಾರ್ಫ್ ವಿವಾದ ಸುಖಾಂತ್ಯ

Advt_Headding_Middle
Advt_Headding_Middle

 

ಸುಳ್ಯದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಸ್ಕಾರ್ಫ್ ಹಾಕಿ ಪರೀಕ್ಷೆ ಬರೆಯಲು ಬಿಟ್ಟಿಲ್ಲವೆಂಬ ಕಾರಣಕ್ಕೆ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದ ಹಾಗೂ ಕಾಲೇಜು ಪ್ರಾಂಶುಪಾಲರು, ಸಲಹೆಗಾರರು ಹಾಗೂ ವಿದ್ಯಾರ್ಥಿನಿಯ ಪೋಷಕರ ನಡುವೆ ಮಾತುಕತೆ ನಡೆದು ಸಮಸ್ಯೆ ಸುಖಾಂತ್ಯಗೊಂಡ ಘಟನೆ ವರದಿಯಾಗಿದೆ.

ಸುಳ್ಯದ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ನಿನ್ನೆಯಿಂದ ವಿಶ್ವವಿದ್ಯಾನಿಲಯದ ಪರೀಕ್ಷೆ ಆರಂಭಗೊಂಡಿದೆ. ನಿಯಮದ ಪ್ರಕಾರ ಸಮವಸ್ತ್ರ ಹಾಗೂ ಪರೀಕ್ಷೆ ಸಂಬಂಧಿತ ವಸ್ತುಗಳು ಹೊರತು ಪಡಿಸಿ ಇತರ ವಸ್ತುಗಳನ್ನು ತರಲು ಅವಕಾಶವಿಲ್ಲ.

 

https://youtube.com/shorts/Br5C9i09LYw?feature=share

ಪ್ರಥಮ ಕಾನೂನು ಪದವಿಯ ವಿದ್ಯಾರ್ಥಿನಿಯೊಬ್ಬಳು ನಿನ್ನೆ ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಪರೀಕ್ಷೆ ಬರೆಯಲು ಹೋದಳೆಂದೂ ಆಗ ಕಾಲೇಜಿನ ಪ್ರಾಂಶುಪಾಲರು ಪರೀಕ್ಷೆ ಹಾಲ್ ಗೆ ಸ್ಕಾರ್ಫ್ ಕಟ್ಟಿಕೊಂಡು ಬರುವಂತಿಲ್ಲ. ಇದು ನಿಯಮಬಾಹಿರ ಎಂದು ಹೇಳಿದರೆಂದೂ, ಅಸಮಾಧಾನ ಗೊಂಡ ವಿದ್ಯಾರ್ಥಿನಿ ತಾನು ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿ ಹೊರಬಂದಳೆಂದೂ ತಿಳಿದುಬಂದಿದೆ.

ವಿದ್ಯಾರ್ಥಿನಿ ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದಳು.

ವಿಷಯ ತಿಳಿದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯವರು ಇಂದು ಕಾನೂನು ಕಾಲೇಜು ಎದುರು ಜಮಾಯಿಸಿದರು. ಪೋಲೀಸರು ಬಂದರು. ವಿದ್ಯಾರ್ಥಿನಿಯ ಪೋಷಕರು ಕೂಡಾ ಕಾಲೇಜಿಗೆ ಬಂದರು.

 

ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣರು, ಅಕಾಡೆಮಿ ಅಡ್ವೈಸರ್ ಪ್ರೊ.ಬಾಲಚಂದ್ರ ಗೌಡರು, ವಿದ್ಯಾರ್ಥಿನಿ ಹಾಗೂ ಅವರ ಪೋಷಕರಿದ್ದು ಮಾತುಕತೆ ನಡೆಯಿತು. ಕಾಲೇಜು ಕಡೆಯಿಂದ ವಿಶ್ವವಿದ್ಯಾನಿಲಯದ ನಿಯಮಗಳನ್ನು ಹೇಳಿದರೆ, ವಿದ್ಯಾರ್ಥಿಯ ಪೋಷಕರು ಧರ್ಮದ ಕಟ್ಟುಪಾಡುಗಳನ್ನು ಮುಂದಿಟ್ಟರೆನ್ನಲಾಗಿದೆ. ಕೆಲ ಹೊತ್ತು ನಡೆದ ಮಾತುಕತೆಯ ಬಳಿಕ, ‘ ವಿದ್ಯಾರ್ಥಿನಿಯ ಇಚ್ಛೆಯಂತೆ ಸ್ಕಾರ್ಫ್ ಹಾಕಿ ಪರೀಕ್ಷೆ ಬರೆಯಲಿ. ಆದರೆ ಪರೀಕ್ಷೆ ಸ್ಕ್ವಾಡ್ ನವರು ಬಂದು ತಪಾಸಣೆ ನಡೆಸಿದರೆ ಅದಕ್ಕೆ ಸಹಕಾರ ನೀಡಬೇಕು’ ಎಂದು ಕಾಲೇಜಿನವರು ಹೇಳಿದಾಗ ವಿದ್ಯಾರ್ಥಿ ನಿ ಹಾಗೂ ಪೋಷಕರು ಒಪ್ಪಿದರು. ಇದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿತು.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯ ನಾಯಕ ಅನ್ಸಾರ್ ಬೆಳ್ಳಾರೆ, ‘ ಎಲ್ಲ ಕಾನೂನು ಕಾಲೇಜುಗಳಲ್ಲಿಯೂ ಪರೀಕ್ಷೆ ನಡೆಯುತ್ತಿದೆ. ಎಲ್ಲಿಯೂ ಸ್ಕಾರ್ಫ್ ತೆಗೆಯಬೇಕೆಂದು ಹೇಳಿಲ್ಲ. ಇಲ್ಲಿ ಮಾತ್ರ ಹೇಳುತ್ತಿದ್ದಾರೆ. ಇದು ಸರಿಯಲ್ಲ. ಯುನಿವರ್ಸಿಟಿ ಯಲ್ಲಿಯೂ ಆ ನಿಯಮ ಇಲ್ಲ. ಮತ್ತು ವಿದ್ಯಾರ್ಥಿನಿಯ ಇಚ್ಛೆಗೆ ವಿರುದ್ಧವಾಗಿ ಸ್ಕಾರ್ಫ್ ತೆಗೆಯುವುದು ಸರಿಯಲ್ಲ. ಸ್ಕಾರ್ಫ್ ಹಾಕಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಅಕಾಡೆಮಿ ಅಡ್ವೈಸರ್ ಪ್ರೊ.ಬಾಲಚಂದ್ರ ಗೌಡರ ಜತೆ ಈ ಕುರಿತು ಮಾತನಾಡಿದಾಗ, ‘ ಯುನಿವರ್ಸಿಟಿ ಪರೀಕ್ಷೆ ಸಂದರ್ಭ ಪ್ರಾಂಶುಪಾಲರು ನಿಯಮವನ್ನು ಹೇಳಿದ್ದಾರೆ. ಕಾಲೇಜಿನ ಶಿಸ್ತು ಕಾಪಾಡುವುದು ಎಲ್ಲರ ಜವಾಬ್ದಾರಿ. ವಿದ್ಯಾರ್ಥಿ ತನ್ನ ಇಚ್ಚೆಯಂತೆ ಸ್ಕಾರ್ಫ್ ಹಾಕಿ ಪರೀಕ್ಷೆ ಬರೆಯಬಹುದೆಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ ಸ್ಕ್ಕಾಡ್ ನವರು ಬಂದಾಗ ತಪಾಸಣೆ ನಡೆಸುತ್ತಾರೆ. ಅದಕ್ಕೆ ಸಹಕಾರ ನೀಡಬೇಕೆಂದು ಹೇಳಿದ್ದೇವೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ” ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.