ಸಂಪಾಜೆ ಸಹಕಾರಿ ಸಂಘದಲ್ಲಿ ರಬ್ಬರ್ ನೇರ ಖರೀದಿ ಉದ್ಘಾಟನೆ

Advt_Headding_Middle
Advt_Headding_Middle

 

ದ.ಕ ಜಿಲ್ಲಾ ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರಿಂದ ಹಾಗೂ ರಬ್ಬರ್ ಬೆಳೆಗಾರರಿಂದ ರಬ್ಬರ್ ಶೀಟ್ ಗಳನ್ನು ಖರೀದಿಸಿ ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಯವರು ಎ.16ರಂದು ಉದ್ಘಾಟನೆ ಮಾಡಿದರು.
ಸ೦ಸ್ಥೆಯು 1೦೦ ವರ್ಷಗಳನ್ನು ಪೂರೈಸುತ್ಥಿರುವ ಸ೦ದರ್ಭದಲ್ಲಿ ಸ೦ಘದ ಸದಸ್ಯರಿಂದ ಹಾಗೂ ರಬ್ಬರ್ ಉತ್ಪಾದಕರಿಂದ ಉತ್ತಮ ಬೆಲೆಯಲ್ಲಿ ರಬ್ಬರ್ ಶೀಟ್ ಗಳನ್ನು ಖರೀದಿಸಿ ಅದನ್ನು ನೇರವಾಗಿ ಮುಕ್ತ ಮಾರುಕಟ್ಟೆಗೆ ಮಾರಾಟ ಮಾಡುವ ಮೂಲಕ ಬೆಳೆಗಾರರಿಗೆ ಉತ್ತಮ ಬೆಲೆಯನ್ನು ನೀಡುವುದರೊ೦ದಿಗೆ ಸ೦ಘಕ್ಕೆ ಆದಾಯ ಬರುವ ಹೊಸ ಯೋಜನೆಯನ್ನು ಸ೦ಘದ ಆಡಳಿತ ಮ೦ಡಳಿಯು ಹಮ್ಮಿಕೊ೦ಡಿದೆ.

ಕಾರ್ಯಕ್ರಮದ ಜೊತೆ ಸಾವಯವ ಗೊಬ್ಬರದ ಉಪಯೋಗದ ಬಗ್ಗೆ ಮಾಹಿತಿಯನ್ನು ಕೊಕ್ಕಡ ಹಾಲು ಉತ್ಪಾದಕ ಸಹಕಾರಿ ಸ೦ಘದ ಸ್ಠಾಪಕ ಅಧ್ಯಕ್ಷರೂ, ಪ್ರಗತಿ ಪರ ಕೃಷಿಕರಾದ ದಿನಕರ ಕೊಕ್ಕಡ ರವರು ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವೀರೇಂದ್ರ ಕುಮಾರ್, ನಿರ್ದೇಶಕರಾದ ಗಣಪತಿ ಭಟ್ ಪಿ ಎನ್, ಆನಂದ ಪಿ ಎಲ್, ಜಗದೀಶ ರೈ ಕೆ ಆರ್, ಹಮೀದ್ ಹೆಚ್, ಚಂದ್ರ ಶೇಖರ ಕೆ ಯು, ರಾಜೀವಿ ಕೆ, ಯಮುನ ಬಿ ಎಸ್, ಸುಮತಿ ಯಸ್, ಮಾಜಿ ಅಧ್ಯಕ್ಷರಾದ ಜಗದೀಶ ಕೆ ಪಿ, ಸದಸ್ಯರಾದ ರಾಮಚಂದ್ರ ಕಲ್ಲಗದ್ದೆ ಮುಂತಾದವರು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.