ಮೊಗರ್ಪಣೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ದೌರತುಲ್ ಕುರುಹಾನ್ ಪಾರಾಯಣಕ್ಕೆ ಚಾಲನೆ

Advt_Headding_Middle
Advt_Headding_Middle

 

ಮುಸಲ್ಮಾನ ಬಾಂಧವರ ಪವಿತ್ರ ತಿಂಗಳು ರಂಜಾನ್ ಆರನೇ ದಿನವಾದ ಇಂದು ಪ್ರಥಮ ಬಾರಿಗೆ ಮೊಗರ್ಪಣೆ ಜುಮ್ಮಾ ಮಸ್ಜಿದ್ ನ ಅಧೀನದಲ್ಲಿರುವ ಎಲ್ಲಾ ಸದಸ್ಯರ ಮನೆಗಳಲ್ಲಿ ಹಾಗೂ ಮಸ್ಜಿದ್ ಆವರಣದಲ್ಲಿ ಏಕಕಾಲದಲ್ಲಿ ಖತಂ ಕುರಾನ್ ಪಾರಾಯಣ ಇಂದು ನಡೆಯಿತು. ಇಂದು ಮಧ್ಯಾಹ್ನ ಝುಹರ್ ನಮಾಜಿನ ನಂತರ ಈ ಕಾರ್ಯಕ್ರಮಕ್ಕೆ ಸ್ಥಳೀಯ ಖತೀಬರಾದ ಹಾಫೀಲ್ ಶೌಕತ್ ಅಲಿ ಸಕಾಫಿ ಚಾಲನೆ ನೀಡಿದರು. ಜಮಾಹತ್ ಪರಿಸರದ ಪುರುಷರು ಮಸೀದಿಯಲ್ಲಿ ಕುರುಹಾನ್ ಪಾರಾಯಣ ನಡೆಸಿದರೆ, ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಕುರಾನ್ ಪಾರಾಯಣ ನಡೆಸಿ ಏಕಕಾಲದಲ್ಲಿ 5 ಖತಮ್ ಕುರುಹಾನ್ ಪೂರೈಸಿದರು. ನಂತರ ಸಾಮೂಹಿಕ ಪ್ರಾರ್ಥನೆ ನಡೆಸಿ ಹಾಫಿಲ್ ಶೌಕತ್ ಅಲಿ ಸಕಾಫಿ ಪ್ರಪಂಚಕ್ಕೆ ಬಂದಿರುವ ಮಹಾಮಾರಿ ಕೊರೋನ ವೈರಸ್ ಸಂಪೂರ್ಣವಾಗಿ ನಿರ್ಮೂಲನೆ ಗೊಂಡು ಲೋಕಶಾಂತಿ ಗೊಳ್ಳಲು ವಿಶೇಷ ಪ್ರಾರ್ಥನೆ ನಡೆಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.