ಎಲಿಮಲೆಯಲ್ಲಿ ಇಫ್ತಾರ್ ಸಂಗಮ,ಅನುಸ್ಮರಣೆ , ರಮಳಾನ್ ಕಿಟ್ , ಹಾಗೂ ವಸ್ತ್ರ ವಿತರಣೆ

Advt_Headding_Middle
Advt_Headding_Middle

 

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪಿ ಟಿ ಉಸ್ತಾದರ ಆಂಡ್ ಪ್ರಯುಕ್ತ ಇಫ್ತಾರ್ ಕೂಟ, ರಮಲಾನ್ ಕಿಟ್ ವಿತರಣೆ ಹಾಗೂ ಪ್ರಾರ್ಥನಾ ಸಂಗಮವು ಎಲಿಮಲೆ ಮಸೀದಿ ವಠಾರದಲ್ಲಿ ಎ.18 ರಂದು ನಡೆಯಿತು.
ಎಲಿಮಲೆ ಮಸೀದಿ ಮುದರ್ರಿಸರಾದ ಅಲ್ಹಾಜ್ ತೌಸೀಫ್ ಸ ಅದಿ ಹರೇಕಳ ಇವರು ಪ್ರಾರ್ಥನಾ ಸಂಗಮದ ನೇತೃತ್ವ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಹರ್ಲಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀರ್ಮುಕ್ಕಿ ಮಸೀದಿಯ ಇಮಾಮರಾದ ಸೂಫಿ ಮುಸ್ಲಿಯಾರ್ ರವರು ಹಾಗೂ ಎಲಿಮಲೆ ಮದ್ರಸ ಮುಖ್ಯೋಪಾಧ್ಯಾಯರಾದ ಮಹ್ಮೂದ್ ಸಖಾಫಿ ಯವರು ಅನುಸ್ಮರಣಾ ಭಾಷಣಗೈದರು.
ಧಾರ್ಮಿಕ ವಿದ್ಯಾಭ್ಯಾಸದಲ್ಲಿ ಬಿರುದು ಪಡೆದ ಉಮ್ಮರ್ ಹನೀಫಿ ಯವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು .
ಎಲಿಮಲೆ ಜಮಾಅತಿಗೊಳಪಟ್ಟ ಕಡು ಬಡ ಕುಟುಂಬಗಳಿಗೆ ರಮಝಾನ್ ಕಿಟ್ ಹಾಗೂ ದರ್ಸ್ ವಿದ್ಯಾರ್ಥಿ ಗಳಿಗೆ ಹಾಗೂ ಉಸ್ತಾದರು ಗಳಿಗೆ ವಸ್ತ್ರ ವಿತರಣೆಯನ್ನು ಸಂಸ್ಥೆಯ ಅಧ್ಯಕ್ಷರಾದ ಲತೀಫ್ ಹರ್ಲಡ್ಕ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ. ಜೀರ್ಮಕ್ಕಿ ಮಸೀದಿ ಅಧ್ಯಕ್ಷರಾದ ಅಬ್ದುಲ್ಲ.ಜಿಎಸ್ ., ಜಮಾಅತ್ ಕಮಿಟಿ ಸಲಹೆಗಾರರಾದ ಯು ಎಂ ಅಬ್ದುಲ್ಲ, ನಸ್ರತ್ ಕಾರ್ಯದರ್ಶಿ ಸೂಫಿ ಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ , ಹಿರಿಯರಾದ ಮೊಹಮ್ಮದ್ ಕುಂಞಿ ಮೇಲೆ ಬೈಲು ,  ಮಹಮ್ಮದ್ ಕುಂಞ್ಞಿ ಹರ್ಲಡ್ಕ, ಜೀರ್ಮಕ್ಕಿ ಮಸೀದಿಯ ಕಾರ್ಯದರ್ಶಿ ಹನೀಫ್ ಜೀರ್ಮಕ್ಕಿ , ತರ್ಬಿಯತ್ ಅಧ್ಯಕ್ಷ ಫೈಝಲ್ ಜೀರ್ಮುಖಿ ,ಕಾರ್ಯದರ್ಶಿ ಜುನೈದ್ ಸಖಾಫಿ, ಮುಅಝಿನ್ ಶಫೀಕ್ ಹನೀಫಿ,ಸಮಿತಿಯ ಸದಸ್ಯರಾದ ಸುಲೈಮಾನ್ ಮೆತ್ತಡ್ಕ.ನಾಸಿರ್ ದೊಡ್ಡಂಗಡಿ . ಇಬ್ರಾಹಿಂ ಸುಪಾರಿ ಮರ್ಚಂಟ್ . ಅಬ್ದುಲ್ ಖಾದರ್ ಹತ್ತಿ ಮಾರಡ್ಕ ಇಬ್ರಾಹಿಂ ಪಳ್ಳಿ ಪಾಲು. ಹೈದರ್ ಹಾಜಿ .ಅಶ್ರಫ್ ದಿನಸಿ ಬಝಾರ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.