ಎ.24-28: ಚಿಲ್ತಡ್ಕ ಶ್ರೀ ಉಳ್ಳಾಕುಲು, ಕುಮಾರ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ

Advt_Headding_Middle
Advt_Headding_Middle

 

ನಾಲ್ಕೂರು ಗ್ರಾಮದ ಚಿಲ್ತಡ್ಕ ಶ್ರೀ ಉಳ್ಳಾಕುಲು, ಕುಮಾರ ದೈವ ಮತ್ತು ಪರಿವಾರ ದೈವಗಳ ದೇವಸ್ಥಾನದಲ್ಲಿ ಶ್ರೀ ಉಳ್ಳಾಕುಲು, ಕುಮಾರ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವವು ಎ.24ರಿಂದ 28ರವರೆಗೆ ಜರುಗಲಿದೆ.
ಎ.24ರಂದು ಬೆಳಿಗ್ಗೆ ಭಕ್ತಾದಿಗಳಿಂದ ಹೊರೆಕಾಣಿಕೆ ಹಾಗೂ ಕಾಣಿಕೆ ಹುಂಡಿ ಸಮರ್ಪಣೆ, ಸಂಜೆ ತಂತ್ರಿಗಳ ಆಗಮನ ಬಳಿಕ ಪುಣ್ಯಾಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ, ರಾತ್ರಿ ಅನ್ನಸಂತರ್ಪಣೆ ಜರುಗಲಿದೆ.
ಎ.25ರಂದು ಪ್ರಾತ:ಕಾಲ ಗಣಪತಿ ಹವನ, ಬ್ರಹ್ಮಕಲಶ ಪೂಜೆ, ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ಜರುಗಲಿದೆ.
ಎ.27ರಂದು ರಾತ್ರಿ ಚಿಲ್ತಡ್ಕದ ಉಳ್ಳಾಕುಲು ಚಾವಡಿಯಿಂದ ಚಿಲ್ತಡ್ಕದ ಪನಿವಾರಡ್ಕ ಮಾಡಕ್ಕೆ ಭಂಡಾರ ತರಲಾಗುವುದು‌. ಎ.28ರಂದು ಪ್ರಾತ:ಕಾಲ ಉಳ್ಳಾಕುಲು ಮತ್ತು ಕುಮಾರ ದೈವಗಳ ನೇಮ, ಬಳಿಕ ಪುರುಷ ದೈವದ ನೇಮ, ಶ್ರೀ ಮಲೆ ಚಾಮುಂಡಿ ಮತ್ತು ಉಪ ದೈಯ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಅಜ್ಜಿ ದೈವದ ನೇಮ, ರಾತ್ರಿ ಗುಳಿಗ ದೈವದ ನೇಮ, ಅನ್ನಸಂತರ್ಪಣೆ ಜರುಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.