ಕೊರೋನಾ ಸೋಂಕಿತರು ಸಾರ್ವಜನಿಕ ಸ್ಥಳಕ್ಜೆ ಬಾರದಂತೆ ನಿಗಾ, ಕಸ ಸಾಗಾಟಕ್ಕೆ ಸ್ವಂತ ನಿಧಿಯಿಂದ ವಾಹನ ಖರೀದಿ

Advt_Headding_Middle
Advt_Headding_Middle

 

ಸಂಪಾಜೆ ಗ್ರಾ.ಪಂ.ನಿರ್ಧಾರ

ದ.ಕ. ಸಂಪಾಜೆ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಎ.20 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ನಡೆದು, ಗ್ರಾಮ ವ್ಯಾಪ್ತಿಯಲ್ಲಿರುವ ಕೊರೋನಾ ಸೋಂಕಿತರು ಮತ್ತು ಅವರ ಅವಲಂಬಿತರು ಸಾರ್ವಜನಿಕ ಸ್ಥಳಗಳಿಗೆ ಬಾರದಂತೆ ನಿಗಾ ವಹಿಸಲು ಹಾಗೂ ಕಸ ಸಾಗಾಟಕ್ಕೆ ಪಂಚಾಯತ್ ನ ಸ್ವಂತ ನಿಧಿಯಿಂಫ ವಾಹನ ಖರೀದಿಸಲು ನಿರ್ಧರಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
ಸಂಪಾಜೆ ಗ್ರಾಮದಲ್ಲಿ ನಡೆಯುವ ಕೋವಿಡ್ ಲಸಿಕೆ ಅಭಿಯಾನದ ಬಗ್ಗೆ ಚರ್ಚಿಸಲಾಯಿತಲ್ಲದೆ, ಗ್ರಾಮದಲ್ಲಿರುವ ಕೊರೊನ ಬಾಧಿತ ಕುಟುಂಬಗಳು ಹಾಗೂ ಅವರ ಅವಲಂಬಿತರು ಸಾರ್ವಜನಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಹೋಗದಂತೆ ಎಚ್ಚರ ವಹಿಸಲು ಹಾಗೂ ಕೊರೋನ ಹರಡದಂತೆ ಮುಂಜಾಗ್ರತಾ ಕ್ರಮ ಅನುಸರಿಸಲು ಎಲ್ಲಾ ಅಂಗನವಾಡಿ ,ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಹಾಯಕರಿಗೆ ಸೂಚಿಸಲಾಯಿತು.
ಅವರಿಗೆ ಬೇಕಾದ ಸಾನಿಟೈಜ್ ಹಾಗೂ ಮಾಸ್ಕನ್ನು ಪಂಚಾಯತ್ ವತಿಯಿಂದ ಕೊಡಲು ತೀರ್ಮಾನಿಸಲಾಯಿತು.
ಆರೋಗ್ಯ ಜಾಗೃತಿಯ ಬಗ್ಗೆ ಗ್ರಾಮದಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲು ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ವಿವಿಧ ಯೋಜನೆಗಳ ಕ್ರಿಯಾ ಯೋಜನೆ ಮಾಡಲು ತೀರ್ಮಾನಿಸಲಾಯಿತು. ಗ್ರಾಮದ ಕುಡಿಯುವ ನೀರಿನ ಯೋಜನೆ ಬಗ್ಗೆ ಚರ್ಚಿಸಲಾಯಿತು.
ರಸ್ತೆ ಕಾಂಕ್ರೀಟಿಕರಣ, ಚರಂಡಿ ನಿರ್ಮಾಣ ಅಭಿವೃದ್ಧಿ ಯೋಜನೆ ಬಗ್ಗೆ ಚರ್ಚಿಸಲಾಯಿತು.
ಕಸ ಸಾಗಾಟಕ್ಕೆ ಸ್ವಂತ ನಿದಿಯಲ್ಲಿ ವಾಹನ ಖರೀದಿ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಲಿಸ್ಸಿ ಮೋನಾಲಿಸಾ, ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಅಬೂಸಾಲಿ ಪಿ. ಕೆ., ಹನೀಫ್ ಎಸ್. ಕೆ, ಕೆ.ಆರ್.ಜಗದೀಶ್ ರೈ, ಶ್ರೀಮತಿ ಸುಮತಿ ಶಕ್ತಿವೇಲು, ಶ್ರೀಮತಿ ವಿಮಲಾ ಪ್ರಸಾದ್, ಶ್ರೀಮತಿ ರಜನಿ ಶರತ್, ಶ್ರೀಮತಿ ಸುಂದರಿ ಮುಂಡಡ್ಕ, ಶ್ರೀಮತಿ ಸುಶೀಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ. ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.