ಗುತ್ತಿಗಾರು ಗ್ರಾ.ಪಂ ನಲ್ಲಿ ಕೊರೋನಾ ಕಾರ್ಯಪಡೆ ಸಭೆ

Advt_Headding_Middle
Advt_Headding_Middle

 

ಗುತ್ತಿಗಾರು ಗ್ರಾ.ಪಂ ನಲ್ಲಿ ಇಂದು ಕೊರೋನಾ ಕಾರ್ಯಪಡೆಯ ಸಭೆ ನಡೆಸಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಗುತ್ತಿಗಾರಿನಲ್ಲಿ ಪ್ರತಿ ಶನಿವಾರ ನಡೆಯುವ ವಾರದ ಸಂತೆ ರದ್ದುಗೊಳಿಸಲಾಗಿದೆ. ಅಂಗಡಿಯವರು ಮಾಸ್ಕ್ ಹಾಕಲು ಪ್ರೇರಿಪಿಸುವುದು, ಸರತಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದು, ಸಮಾರಂಭಗಳಿಗೆ ಸಭಾಭವನ ಹೊಂದಿರುವರಿಗೆ ಪಂಚಾಯತ್ ವತಿಯಿಂದ ಸೂಚನೆ ನೀಡಿ ಯಾವುದೇ ಕಾರ್ಯಕ್ರಮ ನಡೆಸುವವರಿಗೆ ೫೦ ಜನಕ್ಕೆ ಮಿತಿ ಗೊಳಿಸಿ ಪಾಸ್‌ಗಳನ್ನು ಪಡೆಯುವುದು, ಸಾರ್ವಜನಿಕರು ಹೊರ ಬರುವಾಗ ಖಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದಾಗಿ ನಿರ್ಣಿಯಿಸಾಗಿದೆ.
ಈ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇದ್ಯಾಧಿಕಾರಿ ಚೈತ್ರಾ ಭಾನು, ಈಗ ನೀಡುತ್ತಿರುವ ವ್ಯಾಕ್ಸಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊರೋನಾ ಬರದಂತೆ ತಡೆಯಬಹುದೇ ವಿನಹ ಅದೇ ಮದ್ದಿಲ್ಲ ಎಂದರು. ಎಲ್ಲರೂ ವ್ಯಾಕ್ಸಿನ್ ಹಾಕಿಕೊಳ್ಳಲು ಮುಂದೆ ಬರುವಂತೆ ಕೇಳಿಕೊಂಡರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ, ವರ್ತಕರ ಸಂಘದ ಅಧ್ಯಕ್ಷ ವೆಂಕಟ್ರಮಣ ಕೆಂಬ್ರೋಳಿ, ಗ್ರಾ.ಪಂ ಉಪಾಧ್ಯಕ್ಷೆ ಪ್ರಮೀಳಾ ಭಾಸ್ಕರ್, ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ವೇದಿಕೆಯಲ್ಲಿದ್ದರು. ಪಂಚಾಯತ್ ಸಿಬ್ಬಂದಿಗಳಾದ ತೇಜೇಶ್ವರಿ ಸ್ವಾಗತಿಸಿ, ಅಭಿಲಾಷಾ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.