ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಮತ್ತು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಮನವಿ

Advt_Headding_Middle
Advt_Headding_Middle

 

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕಡಬ ಬ್ಲಾಕ್ ಕಾಂಗ್ರೆಸ್ ಮತ್ತು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಮನವಿಯನ್ನು ಎ.21 ರಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.

ಮನವಿಯಲ್ಲಿ ಹಲವು ಭೇಡಿಕೆಗಳನ್ನು ಮುಂದಿಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 120 ನೌಕರನ್ನು ಖಾಯಂ ನ್ನು ತಡೆಹಿಡಿರುವುದನ್ನು ಸರಿ ಪಡಿಸುವಂತೆ, ಸುಬ್ರಹ್ಮಣ್ಯದ ಪ್ರಾಥಮಿಕ ಶಾಲೆಯನ್ನು ಶೀಘ್ರವಾಗಿ ಈಗಿರುವಲ್ಲೇ ಅಥವಾ ಪೊಲೀಸ್‌ ಮೈದಾನದಲ್ಲಿ ನಿರ್ಮಿಸುವಂತೆ ಮನವಿ ಮಾಡಲಾಗಿದೆ. ಅನಘ ವಸತೀಗೃಹದಲ್ಲಿ ಸಿಬ್ಬಂದಿ ಕೊರತೆಯ ನೆವ ಹೇಳಿ ಮೂರು ಅಂತಸ್ತನ್ನು ಮಾತ್ರ ಉಪಯೋಸುತ್ತಿದ್ದು ಎಲ್ಲಾ ಅಂತಸ್ತನ್ನು ಉಪಯೋಗಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ, ಪದವಿ ಪೂರ್ವ ಕಾಲೇಜಿ ನ ಆವರಣದಲ್ಲಿರುವ ನೀರು ಶುದ್ದೀಕರಣ ಘಟಕ ಸೈರನ್ ಅಳವಡಿಸುವಂತೆ, ಎರಡು ಭಾರಿ ಗ್ಯಾಸ್ ಸೋರಿಕೆ ನಡೆದಿರುವುದನ್ನು ಗಂಭೀರವಾಗಿ ಪರಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ, ದೇವಸ್ಥಾನದ ನೌಕರರಿಗೆ 6 ನೇ ವೇತನ ಆಯೋಗದ ಮಂಜೂರಾತಿ ಮತ್ತು ಹೊರಗುತ್ತಿಗೆ ನೌಕರರನ್ನು ದೇವಳದ ನೌಕರರನ್ನಾಗಿ ನೇಮಕ ಮಾಡುವಂತೆ ಕೋರಲಾಗಿದೆ. ದೇವಸ್ಥಾನದಲ್ಲಿ ಹಣ್ಣು ಕಾಯಿ, ಬೆಳ್ಳಿ ಅಂಗಡಿಯನ್ನು ಪುನರ್ ನಿರ್ಮಿಸುವಂತೆ ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಮನವಿ ನೀಡುವ ಸಂದರ್ಭ ಕಡಬ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹರೀಶ್ ಇಂಜಾಡಿ, ಶಿವರಾಮ ರೈ, ಮೋಹನ್‌ದಾಸ್ ರೈ, ಸುಬ್ರಹ್ಮಣ್ಯ ರಾವ್ ನೂಚಿಲ ಕೃಷ್ಣಮೂರ್ತಿ, ಭಾಲಕೃಷ್ಣ ಮರೀಲ್, ಪವನ್ ಎಂ ಡಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.