Breaking News

ದೇಲಂಪಾಡಿ ಕಡೆಯ ವ್ಯಕ್ತಿಯೋರ್ವರಿಗೆ ಕೆನರಾ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಓಟಿಪಿ ಪಡೆದು ೪೦ ಸಾವಿರ ರೂಪಾಯಿ ಪಂಗನಾಮ

Advt_Headding_Middle

ದೇಲಂಪಾಡಿ ಕಡೆಯ ವ್ಯಕ್ತಿಯೊಬ್ಬರಿಗೆ ಜಾಲ್ಸೂರಿನ ಕೆನರಾ ಬ್ಯಾಂಕಿನ ಮ್ಯಾನೇಜರ್ ಮಾತನಾಡುತ್ತಿದ್ದೇನೆ ಎಂದು ದೂರವಾಣಿ ಮೂಲಕ ನಂಬಿಸಿ ಅವರ ದೂರವಾಣಿ ಸಂಖ್ಯೆಗೆ ಬಂದ ಓಟಿಪಿ ನಂಬರ್ ಪಡೆದು ಅವರ ಬ್ಯಾಂಕ್ ಅಕೌಂಟ್‌ನಿಂದ 4೦೦೦೦ ರೂ.ಡ್ರಾ ಮಾಡಿ ವಂಚನೆಗೈದಿರುವರೆನ್ನಲಾದ ಘಟನೆ ವರದಿಯಾಗಿದೆ.

ದೇಲಂಪಾಡಿಯ ವ್ಯಕ್ತಿಯೊಬ್ಬರಿಗೆ ಜಾಲ್ಸುರು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಇದ್ದು, 2 ದಿನಗಳ ಹಿಂದೆ ಅವರಿಗೆ ಬ್ಯಾಂಕ್‌ನಿಂದ ಮೆನೇಜರ್ ಮಾತನಾಡುವುದೆಂದು ಕರೆಯೊಂದು ಬಂತು. ಅವರ ಖಾತೆಯ ವಿವರಗಳನ್ನು ಪಡೆದ ಆ ಫೋನ್ ಕರೆ ಮಾಡಿದ ವ್ಯಕ್ತಿ ನಿಮ್ಮ ನಂಬರ್‌ಗೆ ಒಟಿಪಿ ನಂಬರ್ ಬಂದ ಕೂಡಲೇ ನನಗೆ ಮಾಹಿತಿ ನೀಡಬೇಕೆಂದು ಹೇಳಿಕೊಂಡ ಎನ್ನಲಾಗಿದೆ. ಕೆಲವೇ ಕ್ಷಣದಲ್ಲಿ ಇವರ ದೂರವಾಣಿ ಸಂಖ್ಯೆಗೆ ಓಟಿಪಿ ನಂಬರ್ ಬಂದಿದೆ. ಅದನ್ನು ಅವರು ದೂರವಾಣಿ ಬಂದ ನಂಬರಿಗೆ ನೀಡಿದ್ದಾರೆ. ಆ ಕ್ಷಣದಿಂದ ಪ್ರಥಮ ಬಾರಿಗೆ ೩೦೦೦೦ರೂಪಾಯಿ , ಎರಡನೆಯ ಬಾರಿಗೆ ೯೯೯೯ರೂ , ಮೂರನೆಯ ಬಾರಿಗೆ ೯೯೯ ರೂ ಈ ರೀತಿಯಾಗಿ ಒಟ್ಟು ೪೦,೯೯೮ ರೂಪಾಯಿ ಅವರ ಖಾತೆಯಿಂದ ಡ್ರಾ ಮಾಡಲ್ಪಟ್ಟಿದೆ. ತಾನು ಮೋಸ ಹೋಗಿರುವುದು ತಿಳಿದ ಆ ವ್ಯಕ್ತಿ ಬ್ಯಾಂಕಿಗೆ ಹೋಗಿ ವಿಚಾರಿಸಿ ಬಳಿಕ ಸುಳ್ಯಕ್ಕೆ ಬಂದು ಪೊಲೀಸರಿಗೆ ವಿಷಯ ತಿಳಿಸಿ ಅವರ ಸಲಹೆಯಂತೆ ಆದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.