ಅಪಘಾತಕ್ಕೀಡಾದ ಲವಕುಮಾರ್ ಕರ್ಮಜೆ ಮೃತ್ಯು

Advt_Headding_Middle

ಇತ್ತೀಚೆಗೆ ಬೆಂಗಳೂರಿನ ರಾಮನಗರದಲ್ಲಿ ಅಪಘಾತಕ್ಕೊಳಗಾದ ಲವಕುಮಾರ್ ಕರ್ಮಜೆಯವರು (45) ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ.
ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ಕರ್ಮಜೆ ದಿ.ಜನಾರ್ಧನ ಗೌಡರ ಪುತ್ರ ಲವಕುಮಾರ್ ರವರು ಬೆಂಗಳೂರಿನ ರಾಮನಗರದ ಕನಕಪುರ ತಾಲೂಕಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು ಮಾ.28 ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಮುಖ್ಯ ರಸ್ತೆಗೆ ಪ್ರವೇಶಿಸಿದ ವೇಳೆಯಲ್ಲಿ ಅಪರಿಚಿತ ಕಾರೊಂದು ಅತೀ ವೇಗದಿಂದ ಬಂದು ಡಿಕ್ಕಿ ಹೊಡೆಯಿತು .ಪರಿಣಾಮ ಲವಕುಮಾರ್ ರವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ತಲೆಯ ಹಿಂಭಾಗಕ್ಕೆ, ಎದೆಯ ಭಾಗಕ್ಕೆ ತೀವ್ರ ಗಾಯವಾಗಿದ್ದು ಎರಡು ಕಾಲು ಹಾಗೂ ಕೈಯ ಮೂಳೆ ಮುರಿತಕ್ಕೊಳಗಾಗಿ ಅರೆ ಪ್ರಜ್ಝಾವಸ್ಥೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಚಿಕಿತ್ಸೆಗೆ ಸ್ಪಂದಿಸದಿದ್ದುದರಿಂದ ವೈದ್ಯರ ಸಲಹೆಯಂತೆ ಕಳೆದ ಕೆಲ ದಿನದ ಹಿಂದೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಾಯಿ, ಪತ್ನಿ, ಒಂದು ಹೆಣ್ಣು ಮಗು ಮತ್ತು ಇಬ್ಬರು ಸಹೋದರರನ್ನು ಓರ್ವ ಸಹೋದರಿಯನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.