ಕೊರೋನಾ ಹೆಚ್ಚಳ : ಸುಳ್ಯದಲ್ಲಿ ನಿರ್ಲಕ್ಷ್ಯ – ನ.ಪಂ. ಸಭೆಯಲ್ಲಿ ಅಸಮಾಧಾನ

Advt_Headding_Middle

ಸಭೆಗೆ ಬಾರದ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಒತ್ತಾಯ

ರಾಜ್ಯದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಸುಳ್ಯದಲ್ಲಿ ಪ್ರಕರಣಗಳು ಯಾವ ಹಂತದಲ್ಲಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆ ನ.ಪಂ.ಗೆ ಮಾಹಿತಿ ನೀಡುತ್ತಿಲ್ಲ. ಕಂದಾಯ ಇಲಾಖೆಯವರು ಮತ್ತು ಪೊಲೀಸರು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಇಲ್ಲ ಎಂಬ ಬಗ್ಗೆ ನ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇಂದು ನಡೆದ ನ.ಪಂ. ಸಭೆಯಲ್ಲಿ ನಡೆದಿದೆ.


ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಹಿಸಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡರು, ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಟಿವಿ ನೋಡುವಾಗ ನಡುಕ ಶುರುವಾಗುತ್ತದೆ.

 

ಆದರೆ ಸುಳ್ಯದಲ್ಲಿ ಕೊರೋನಾ ಇದೆಯೋ, ಇಲ್ಲವೋ ಎಂಬ ಬಗ್ಗೆ ನಮಗೆ ಮಾಹಿತಿ ಸಿಗುತ್ತಿಲ್ಲ. ಮಾಹಿತಿ ನೀಡಬೇಕಾದ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯವರು ಸುಮ್ಮನೆ ಕುಳಿತಂತೆ ಕಾಣುತ್ತಿದೆ. ಸಭೆಗೆ ಬರುವಂತೆ ಹೇಳಿದರೂ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಾಧಿಕಾರಿ ಮಾತನಾಡಿ, ಪೊಲೀಸ್ ಅಧಿಕಾರಿಯವರಿಗೆ ಸಭೆಗೆ ಬರಲು ತಿಳಿಸಿದ್ದೇನೆ. ತಹಶೀಲ್ದಾರರು ಮಂಗಳೂರಿನಲ್ಲಿ ಇಂದು ಸಭೆ ಇದೆ ಎಂದು ಹೇಳಿದ್ದಾರೆ ಎಂದು ಹೇಳಿದರು. ಆಗ ಮಾತನಾಡಿದ ವೆಂಕಪ್ಪ ಗೌಡರು, ಮಾಹಿತಿ ನೀಡಬೇಕಾದ ಅಧಿಕಾರಿಗಳು ಸಭೆಗೆ ಬರುವುದಿಲ್ಲವೆಂದಾದರೆ ಕೊರೋನಾದ ಗಂಭೀರತೆಯ ಬಗ್ಗೆ ಅವರು ನಿರ್ಲಕ್ಷ್ಯ ವಹಿಸಿದಂತಾಗುತ್ತದೆ. ಆದ್ದರಿಂದ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಬರೆಯಿರಿ ಎಂದು ಸಲಹೆ ನೀಡಿದರು. ಅಧ್ಯಕ್ಷ ವಿನಯಕುಮಾರರು ಮಾತನಾಡಿ, ಕೊರೋನಾದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಕನಿಷ್ಟ ಪಕ್ಷ ಎಷ್ಟು ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದರೆ ನಮ್ಮಲ್ಲಿ ಮಾಹಿತಿ ಇದ್ದಂತಾಗುತ್ತದೆ. ಪೊಲೀಸರು ಕೂಡಾ ಯಾವ ರೀತಿ ಸರಕಾರದ ಸುತ್ತೋಲೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ನೀಡಬೇಕು. ನಮ್ಮ ರಸ್ತೆಗಳನ್ನು ಬಂದ್ ಮಾಡಿಸುವುದಿದ್ದರೂ ಸಭೆ ಆಗಬೇಕು ಎಂದು ಹೇಳಿದರು. ಈ ವಿಚಾರದಲ್ಲಿ ಕೆಲ ಹೊತ್ತು ಚರ್ಚೆ ನಡೆದು ಬಳಿಕ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ಬರೆಯಲು ಸದಸ್ಯರು ಒತ್ತಾಯಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.