ಕೋವಿಡ್ ನಿರ್ಬಂಧಗಳ ಜಾರಿ : ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ಆಡಳಿತದಿಂದ ಸುಳ್ಯ ನಗರದಲ್ಲಿ ಜನಜಾಗೃತಿ

Advt_Headding_Middle
Advt_Headding_Middle

ಅವಶ್ಯಕ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ಇತರ ಎಲ್ಲಾ ಅಂಗಡಿಗಳ ಮುಂಗಟ್ಟುಗಳನ್ನು ಬಂದ್ ಮಾಡಿಸುವ ರಾಜ್ಯ ಸರ್ಕಾರದ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯವು ಇಂದು ಸುಳ್ಯ ತಹಶೀಲ್ದಾರ್ ಕು. ಅನಿತಾಲಕ್ಷ್ಮಿಯವರ ನೇತೃತ್ವದಲ್ಲಿ ಸುಳ್ಯ ಬಸ್ ನಿಲ್ದಾಣ ಮತ್ತು ಮುಖ್ಯರಸ್ತೆಯಲ್ಲಿ ನಡೆಯಿತು.
ಸುಳ್ಯ ಬಸ್ ನಿಲ್ದಾಣದಲ್ಲಿ ಮೈಕ್ ಕಟ್ಟಿ ಮಾತನಾಡಿದ ತಹಶೀಲ್ದಾರ್ ಅನಿತಾಲಕ್ಷ್ಮಿಯವರು ರಾಜ್ಯ ಸರ್ಕಾರದ ಆದೇಶದಂತೆ ಯಾವುದೆಲ್ಲ ಅಂಗಡಿಗಳು ತೆರೆದಿರಬೇಕು, ಯಾವ ಯಾವ ಅಂಗಡಿಗಳು ಮುಚ್ಚಿರಬೇಕು ಎಂಬ ಬಗ್ಗೆ ಘೋಷಣೆ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ನ.ಪಂ. ಮುಖ್ಯಾಧಿಕಾರಿ ಎಂ..ಆರ್.ಸ್ವಾಮಿ, ಸಿಡಿಪಿಒ ಶ್ರೀಮತಿ ರಶ್ಮಿ ನೆಕ್ರಾಜೆ, ಶಿಕ್ಷಣ ಇಲಾಖೆಯ ವತಿಯಿಂದ ಶ್ರೀಮತಿ ನಳಿನಿ ಪುರುಷೋತ್ತಮ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ,ಗ್ರಾಮ ಕರಣಿಕ ತಿಪ್ಪೇಶ್, ಪಂಜ ಕಂದಾಯ ನಿರೀಕ್ಷಕ ಶಂಕರ್, ನ.ಪಂ. ಇಂಜಿನಿಯರ್ ಶಿವಕುಮಾರ್ ಮೊದಲಾದ ಅಧಿಕಾರಿಗಳು ಜೊತೆಗಿದ್ದರು.

ಆ ಬಳಿಕ ತಹಶೀಲ್ದಾರ್ ಮತ್ತು ಅಧಿಕಾರಿಗಳು ಅಂಗಡಿಗಳಿಗೆ ತೆರಳಿ ಬಂದ್ ಕುರಿತ ಸೂಚನೆಗಳನ್ನು ನೀಡಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.