ಅರಣ್ಯ ಸಚಿವ ಅರವಿಂದ ಲಿಂಬಾವಳಿ ಕುಕ್ಕಂದೂರು ತಮಿಳು ಕಾಲನಿಗೆ ಭೇಟಿ

Advt_Headding_Middle
Advt_Headding_Middle

 

 

ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಮಿಕರ ವಸತಿ ವೀಕ್ಷಿಸಿದ ಸಚಿವರು
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಜಾಲ್ಸೂರು ಗ್ರಾಮದ ಕುಕ್ಕಂದೂರು ತಮಿಳು ಕಾಲನಿಗೆ ಎ.23ರಂದು ಸಂಜೆ ಭೇಟಿ ನೀಡಿ ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಮಿಕರ ಸಮಸ್ಯೆ ಆಲಿಸಿದಲ್ಲದೆ, ಕೆ.ಎಫ್.ಡಿ.ಸಿ. ಕಾರ್ಮಿಕರ ವಸತಿ ವೀಕ್ಷಿಸಿದರು.
ಕುಕ್ಕಂದೂರು ತಮಿಳು ಕಾಲನಿಯಲ್ಲಿ ಕೆ.ಎಫ್.ಡಿ.ಸಿ. ರಬ್ಬರ್ ಪ್ಲಾಂಟೇಷನ್ ತೋಟ ವೀಕ್ಷಿಸಿದ ಬಳಿಕ ಕುಕ್ಕಂದೂರು ತಮಿಳು ನಿವಾಸಿಗಳ ಕಾಲನಿಗೆ ಭೇಟಿ ನೀಡಿ ಕಾಲನಿ ನಿವಾಸಿಗಳ ಮನೆ ವೀಕ್ಷಿಸಿದರು.
ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಮಿಕರಿಗೆ ಹೊಸ ನಿರ್ಮಾಣ ಮಾಡಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಸಚಿವರೊಂದಿಗೆ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ.ಬಾಬು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೆ.ಎಫ್.ಡಿ.ಸಿ. ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.