ಅರಣ್ಯ ಸಚಿವ ಅರವಿಂದ ಲಿಂಬಾವಳಿ ಯವರಿಂದ ಇಲಾಖೆಯ ಪ್ಲಾಂಟೇಷನ್ ಕಾಮಗಾರಿಗಳ ಮತ್ತು ಜಮೀನು ವೀಕ್ಷಣೆ

Advt_Headding_Middle

 

ಕೆ .ಎಫ್. ಡಿ.ಸಿ ಕಾರ್ಮಿಕರ ಮತ್ತು ಗ್ರಾಮಸ್ಥರ ಅಹವಾಲು ಸ್ವೀಕಾರ

ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ತಾಲೂಕಿನ ವಿವಿಧ ಕಡೆಗಳಿಗೆ ಎ.23 ರಂದು ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.ಈ ಸಂದರ್ಭ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲಿಸಿದರು. ಗ್ರಾಮಸ್ಥರ ಮತ್ತು ಕಾರ್ಮಿಕರ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು.
ಉಬರಡ್ಕ ಮಿತ್ತೂರು ಗ್ರಾಮದ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ಅರಣ್ಯ ಇಲಾಖೆಯ ಆಧೀನದಲ್ಲಿರುವ ಸರಕಾರಿ ಜಾಗವನ್ನು ವೀಕ್ಷಿಸಿದರು. ಈ ಜಾಗದಲ್ಲಿ ಅರೆಭಾಷೆ ಅಕಾಡೆಮಿಯ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಅಮರ ಸುಳ್ಯದ ಸ್ಮಾರಕ ಸಾಂಸ್ಕೃತಿಕ ಉದ್ಯಾನವನ ನಿರ್ಮಾಣದ ಕುರಿತು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಯವರು ವಿವರಿಸಿದರು. ಬಳಿಕ ಸಚಿವರು ಜೀಪಿನಲ್ಲಿ ತೆರಳಿ ಸುಮಾರು 17 ಎಕ್ರೆ ಸರಕಾರಿ ಜಾಗವನ್ನು ವೀಕ್ಷಣೆ ಮಾಡಿದರು. ಅಲ್ಲಿಂದ ತೆರಳಿದ ಸಚಿವರು ನಾಗಪಟ್ಟಣ ಕೆ.ಎಫ್. ಡಿ.ಸಿ.ವಿಶ್ರಾಂತಿ ಗೃಹದಲ್ಲಿ ಗ್ರಾಮಸ್ಥರ ಹಾಗೂ ಕೆ.ಎಫ್.ಡಿ.ಸಿ. ಕಾರ್ಮಿಕರ ಅಹವಾಲನ್ನು ಸ್ವೀಕರಿಸಿದರು. ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ಗ್ರಾಮದ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು. ಕೆ.ಎಫ್. ಡಿ.ಸಿ
ಕಾರ್ಮಿಕರಿಗೆ ಮನೆ ನಿವೇಶನ ಒದಗಿಸುವ ಬಗ್ಗೆ ಹಾಗೂ ಅರೆಕಾಲಿಕ ನೌಕರರನ್ನು ಖಾಯಂ ಮಾಡುವಂತೆ, ಜಾತಿ ಪ್ರಮಾಣ ಪತ್ರದ ಸಿಂಧುತ್ವ ವಾಗುವಂತಾಗಬೇಕು. ನಿವೃತ್ತಿಯ ಸಂದರ್ಭ ಸಿಗಬೇಕಾದ ವೇತನ ತಕ್ಷಣ ದೊರಕುವಂತೆ ಮಾಡಬೇಕೆಂಬ ಬೇಡಿಕೆಯನ್ನು ಕಾರ್ಮಿಕರ ಮುಖಂಡರು ಸಲ್ಲಿಸಿದರು.

ಕಾಡಾನೆ ಹಾವಳಿಯಿಂದ ಕೃಷಿಕರಿಗಾಗುತ್ತಿರುವ ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಆನೆ ಕಂದಕ ಮತ್ತು ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುವುದು. ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಯನ್ನು ಅಗಲೀಕರಣಗೊಳಿಸಬೇಕಾದರೆ ಮುಂಚಿತವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವುದಾದರೆ ಇಲಾಖೆ ಅಡ್ಡಿ ಪಡಿಸುವುದಿಲ್ಲ. ಡೀಮ್ಡ್ ಅರಣ್ಯ ಪ್ರದೇಶವು ಇಲಾಖೆಯ ಸ್ವಾಧೀನದಲ್ಲಿರುವುದರಿಂದ ಅದನ್ನು ನಿವೇಶನಕ್ಕಾಗಿ ಮೀಸಲಿಡುವ ಬಗ್ಗೆ ಪ್ರಸ್ತಾವನೆ ಪ್ರಕ್ರಿಯೆಯಲ್ಲಿದೆ ಎಂದು ಸುದ್ದಿಯೊಂದಿಗೆ ಸಚಿವರು ಪ್ರತಿಕ್ರಿಯಿಸಿದರು.ಈ ಸಂದರ್ಭ
ಮೀನುಗಾರಿಕಾ ಬಂದರು ಸಚಿವ ಎಸ್. ಅಂಗಾರ ರವರು ಜತೆಯಲ್ಲಿದ್ದರು. ಸುಳ್ಯ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ನ.ಸೀತಾರಾಮ , ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ನ.ಪಂ.ಅಧ್ಯಕ್ಷ ವಿನಯ ಕಂದಡ್ಕ, ನ.ಪಂ.ಮಾಜಿ ಅಧ್ಯಕ್ಷ ಎನ್. ಎ.ರಾಮಚಂದ್ರ, ಎ.ವಿ.ತೀರ್ಥರಾಮ, ಸುಬೋದ್ ಶೆಟ್ಟಿ ಮೇನಾಲ, ಹರೀಶ್ ರೈ ಉಬರಡ್ಕ , ಸುಳ್ಯ ತಹಶೀಲ್ದಾರ್ ಅನಿತ ಲಕ್ಷ್ಮೀ, ಅರಣ್ಯ ಇಲಾಖೆಯ ಎ.ಸಿ.ಎಫ್ ಅಸ್ಟಿನ್ ಪಿ.ಸೋನ್ಸೆ, ಡಿ.ಎಫ್. ಡಾ.ಕರಿಕರನ್, ಸಿ.ಸಿ.ಎಫ್ ಪ್ರಕಾಶ್ ನೆಟ್ಟಾರ್ ಕೆರೆ, ಕೆ.ಎಫ್. ಡಿ.ಸಿ. ಇ.ಡಿ. ಕಮಲ, ಆರ್. ಎಫ್. ಗಿರೀಶ್ ಸುಳ್ಯ, ಮಂಜುನಾಥ ಪಂಜ, ರಾಘವೇಂದ್ರ ಸುಬ್ರಹ್ಮಣ್ಯ, ಕೆ.ಎಫ್. ಡಿ.ಸಿ. ವ್ಯವಸ್ಥಾಪಕ ಸುರೇಶ್ ಪರಾಂಡೆ, ರಂಗನಾಥ್ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಮಿಕರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.