ದುಗ್ಗಲಡ್ಕ : ಕರ್ಫ್ಯೂ ತಿಳಿಯದೆ ಪಡಿತರಕ್ಕಾಗಿ ಕಾಯುತ್ತಿದ್ದ ವೃದ್ಧೆ

Advt_Headding_Middle
Advt_Headding_Middle

 

ಬೆಳಿಗ್ಗೆ ೧೦ ಗಂಟೆಯಿಂದ ಯಾವ ಅಂಗಡಿಗಳೂ ತೆರೆದಿರುವುದಿಲ್ಲವೆಂಬ ಮಾಹಿತಿ ತಿಳಿಯದ ವೃದ್ದೆಯೊಬ್ಬರು ಪಡಿತರ ಕೊಂಡೊಯ್ಯುವುದಕ್ಕಾಗಿ ದುಗಲಡ್ಕಕ್ಕೆ ಬಂದು ಬಸ್ಸು ತಂಗುದಾಣದಲ್ಲಿ ಕಾಯುತ್ತಿದ್ದ ಹಾಗೂ ಆ ದಾರಿಯಾಗಿ ಬಂದ ಸುದ್ದಿ ವರದಿಗಾರರು ವೃದ್ದೆಗೆ ಕರ್ಫ್ಯೂ ಬಗ್ಗೆ ಮಾಹಿತಿ ನೀಡಿ ಅವರನ್ನು ಮನೆಗೆ ಕಳುಹಿಸಿ ಕೊಟ್ಟ ಘಟನೆ ವರದಿಯಾಗಿದೆ.
ಇಂದು ಪೂರ್ವಾಹ್ನ ೧೧.೨೦ರ ವೇಳೆಗೆ ದುಗ್ಗಲಡ್ಕದ ಬಸ್ಸು ತಂಗುದಾಣದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ವೃದ್ಧೆಯೊಬ್ಬರನ್ನು ಆ ದಾರಿಯಾಗಿ ಬೈಕ್‌ನಲ್ಲಿ ಬಂದ ಸುದ್ದಿ ವರದಿಗಾರ ದಯಾನಂದ ಕೊರೊತ್ತೋಡಿಯವರು ನೋಡಿ ಮಾತನಾಡಿಸಿದರು. ಪಡಿತರಕ್ಕಾಗಿ ತಾನು ಕಾಯುತ್ತಿರುವುದಾಗಿ ವೃದ್ದೆ ಹೇಳಿದರು. ಕರ್ಫ್ಯೂ ಕಾರಣದಿಂದಾಗಿ ಆ ವೇಳೆಗೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಸರಕಾರ ವಿಧಿಸಿರುವ ಕರ್ಫ್ಯೂ ವಿಚಾರದ ಬಗ್ಗೆ ಹೇಳಿ, ಇನ್ನು ಸೋಮವಾರ ಪಡಿತರಕ್ಕೆ ಬರುವಂತೆ ತಿಳಿಸಿ ವೃದ್ದೆಯನ್ನು ವರದಿಗಾರ ಮನೆಗೆ ಕಳುಹಿಸಿ ಕೊಟ್ಟರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.