Breaking News

ಚಳ್ಳ ದೇವಿ ಸಾನಿಧ್ಯದಲ್ಲಿ ಭಕ್ತರಿಂದ ಶ್ರಮದಾನ

Advt_Headding_Middle

ಎಲಿಮಲೆ ಸಮೀಪದ ಚಳ್ಳದಲ್ಲಿರುವ ದೇವಿ ಸಾನಿಧ್ಯದ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ಸಂಕಲ್ಪಿಸಿರುವ ಭಕ್ತರು ಇಂದು ಅಲ್ಲಿ ಶ್ರಮದಾನ ಕಾರ್ಯ ನಡೆಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ಭಕ್ತರ ಸಭೆಯಲ್ಲಿ ಈ ಸಾನಿಧ್ಯವನ್ನು ಜೀರ್ಣೋದ್ಧಾರಗೊಳಿಸುವ ಸಂಕಲ್ಪ ಮಾಡಲಾಗಿತ್ತು. ಇಂದು ಚಳ್ಳ ಮನೆಯಲ್ಲಿ ಗಣಹೋಮ ನಡೆದಿದ್ದು, ತರುವಾಯ ಶ್ರೀ ಕ್ಷೇತ್ರ ಸಂಚಾಲನಾ ಸಮಿತಿ ನೇತೃತ್ವದಲ್ಲಿ ಭಕ್ತರಿಂದ ಶ್ರಮದಾನ ನಡೆಯಿತು. ಈ ಸಂದರ್ಭ ಸಾನಿಧ್ಯದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದಾಗ ದೇವಸ್ಥಾನದ ಮತ್ತಷ್ಟು ಕುರುಹುಗಳು, ಮೂರ್ತಿಗಳು ಇನ್ನಿತರ ಪರಿಕರಗಳು ಕಂಡುಬಂತು.
ಸಂಚಾಲನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ತಳೂರು, ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ ಮೂಲೆತೋಟ, ಕೋಶಾಧಿಕಾರಿ ಕೆ.ಆರ್.ರಾಧಾಕೃಷ್ಣ ಮಾವಿನಕಟ್ಟೆ, ಬಾಳೆತೋಟ ನಾರಾಯಣ ಗೌಡ, ಡಿ.ಟಿ.ದಯಾನಂದ, ಜಯಂತ ಅಂಬೆಕಲ್ಲು, ಶೈಲೇಶ್ ಅಂಬೆಕಲ್ಲು, ಸುಬ್ರಹ್ಮಣ್ಯ ಭಟ್ ಚಳ್ಳ, ಭಾಸ್ಕರ ಬಾಳೆತೋಟ ಸೇರಿದಂತೆ ಹಲವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.