ಎಲ್ಲಿ ಹೋಗುವುದಿದ್ದರೂ ಮಾಸ್ಕ್ ಧರಿಸಿ, ಕೋವಿಡ್ ನಿಯಮ ಪಾಲಿಸಿ : ಆಂಜನೇಯ ರೆಡ್ಡಿ

Advt_Headding_Middle
Advt_Headding_Middle

ಕೋವಿಡ್‌ಗೆ ಸಂಬಂಧಪಟ್ಟಂತೆ ಸರಕಾರ ಈಗ ಹೊರಡಿಸಿದ ಆದೇಶ ,ನಿಯಮಗಳನ್ನು ಪಾಲನೆ ಮಾಡುವುದು ಜನರ ಮೂಲಭೂತ ಕರ್ತವ್ಯ. ಜನರಿಗೆ ಬೇಕಾಗುವ ಮೂಲಭೂತ ವಸ್ತುಗಳನ್ನು ಮನೆಯಲ್ಲಿರುವ ಯುವಕರು ಜವಾಬ್ದಾರಿ ತೆಗೆದುಕೊಂಡು ತರತಕ್ಕದ್ದು. ದಿನ, ವಾರಕ್ಕೆ ಅಥವಾ 1೦ ದಿನಕ್ಕೆ ಬೇಕಾಗುವ ವಸ್ತುಗಳನ್ನು ಪಟ್ಟಿ ಮಾಡಿಕೊಂಡು,ಮನೆ ಹತ್ತಿರದ ಜನ ಕಡಿಮೆ ಇರುವ ಅಂಗಡಿಗೆ ಹೋಗಿ ಅಗತ್ಯವಾದ ವಸ್ತುಗಳನ್ನು ಪಡೆದುಕೊಳ್ಳಬೇಕು.ಸ್ಯಾನಿಟೈಸರ್, ಮಾಸ್ಕ್ ಹಾಕಿಕೊಂಡಿರಬೇಕು.ಈ ಸಂದರ್ಭದಲ್ಲಿ ಪೇಟೆಯಲ್ಲಿ ಸುಮ್ಮನೆ ತಿರುಗಾಡದೆ ಆಗತ್ಯ ವಸ್ತುಗಳನ್ನು ಪಡೆದುಕೊಂಡು ಮನೆಗೆ ಹೋಗಬೇಕು. ಪೋಲಿಸರು ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಮತ್ತು ಕೇಳಿದಾಗ ಸಂಪರ್ಕವಾದ ದಾಖಲೆಗಳನ್ನು ,ಉತ್ತರವನ್ನು ಕೊಡಬೇಕಾಗುತ್ತದೆ. ಆರೋಗ್ಯದ ವಿಷಯದಲ್ಲಿ ಆಸ್ಪತ್ರೆಗೆ ಹೋಗ ಬೇಕಾದಲ್ಲಿ ಸಮಸ್ಯೆ ಇರುವವರು ಒಬ್ಬರು ಮತ್ತು ಅವರ ಜೊತೆಗೆ ಒಬ್ಬರು ಹೋಗತಕ್ಕದ್ದು.ಅದಕ್ಕೆ ಪೋಲಿಸರ ಸಹಕಾರ ಇರುತ್ತದೆ.ಏನಾದರೂ ತುರ್ತು ಸಂದರ್ಭದಲ್ಲಿ ಹೋಗಲು ಪೋಲಿಸ್‌ರು ಅನುವುಮಾಡಿಕೊಡುತ್ತಾರೆ.ಯಾವುದೇ ಕಾರಣಕ್ಕೂ ಮದುವೆ,ಸಂಪ್ರದಾಯವಾಗಿ ನಡೆಯುವ ದೇವರ ಕಾರ್ಯಕ್ರಮಗಳು ಅಂದರೆ ಜನ ಹೆಚ್ಚು ಸೇರುತ್ತಾರೆ. ಇಂತಹ ಕಾರ್ಯಕ್ರಮ ಜನ ಬರಬೇಡಿ ಅಂತ ಹೇಳಲು ಆಗುವುದಿಲ್ಲ. ಹಾಗಾಗಿ ಜನ ಕಾರ್ಯಕ್ರಮಗಳನ್ನು ಮುಂದೂಡಬೇಕು. ಜೀವ ಬಹಳ ಅಮೂಲ್ಯವಾದುದು ಈಗ ಬಂದಿರುವ ಪರಿಸ್ಥಿತಿಗೆ ಅನುಗುಣವಾಗಿ ಸರಕಾರ ,ಪೋಲೀಸ್ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.ಎಲ್ಲಿ ಹೋಗುವುದಿದ್ದರೂ ಮಾಸ್ಕ್ ಧರಿಸಲೇಬೇಕು.ಇಷ್ಟು ನಿಯಮಗಳನ್ನು ಪಾಲನೆ ಮಾಡಿದರೆ ಕೋರೋನಾ ತಡೆಗಟ್ಟಬಹುದು , ನಿಯಂತ್ರಣದಲ್ಲಿ ಇಡಬಹುದು.

ಆಂಜನೇಯ ರೆಡ್ಡಿ
ಎಸ್.ಐ. ಬೆಳ್ಳಾರೆ ಪೋಲಿಸ್ ಠಾಣೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.