Breaking News

ಮರೆಯಾದರೂ ಮರೆಯಲಾಗದ ಉದಯಮಯ್ಯರ ನೆನಪು

Advt_Headding_Middle

5 ವರ್ಷಗಳ ಹಿಂದೆ ಇದೇ ದಿನ ಅಂದರೆ 2016 ಎಪ್ರಿಲ್ 27 ತೊಡಿಕಾನ ದೇವಸ್ಥಾನಕ್ಕೂ ಮತ್ತು ಗ್ರಾಮಕ್ಕೂ ಬಹಳ ಬೇಸರದ ದಿನವಾಗಿತ್ತು..
ಅನಾರೋಗ್ಯವೆಂದು ಸುಳ್ಯ ಆಸ್ಪತ್ರೆ ಸೇರಿದ ನಮ್ಮ ತೊಡಿಕಾನ ದೇವಳದ ಕ್ಲರ್ಕ್ ಉದಯಣ್ಣ ತೀರಿಹೋದರೆಂದು ಅರಗಿಸಿಕೊಳ್ಳಲಾಗದ ಸುದ್ದಿ ಬಂದಿತ್ತು..

ಸದಾ ಚುರುಕುತನ ಮತ್ತು ಪರೋಪಕಾರಿಯಾದ ಅವರ ಅಗಲುವಿಕೆ ತೊಡಿಕಾನ ದೇವಸ್ಥಾನಕ್ಕೆ ತುಂಬಲಾರದ ನಷ್ಟ. ಅವರ ವಿದ್ಯಾಭ್ಯಾಸ ಕಡಿಮೆಯಾದರೂ ಭಾಷಾ ಸಂಪನ್ಮೂಲತೆ ಇತ್ತು. ಬೇರೆ ರಾಜ್ಯದ ಭಕ್ತರಲ್ಲಿ , ಅವರ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತೆ ಇಲ್ಲಿಯ ಇತಿಹಾಸ ವಿವರಿಸಿ ದೇವಸ್ಥಾನಕ್ಕೆ ದೇಣಿಗೆ ಬರುವಂತೆ ಮಾಡುತ್ತಿದ್ದ ಪ್ರತಿಭಾವಂತ ಅವರು. ಆಫೀಸಿನ ಕೆಲಸ ಹೊರತುಪಡಿಸಿ ಅಗತ್ಯವಿದ್ದಾಗ ದೇವಸ್ಥಾನದಲ್ಲಿ ಅಡುಗೆ, ಪೂಜೆ ಮತ್ತು ಇತರ ಕೆಲಸಗಳಲ್ಲಿಯೂ ಸೈ ಅನಿಸಿಕೊಂಡ ಸವ್ಯಸಾಚಿ. .ಯಾವುದೇ ಕೆಲಸ ಇರಲಿ ಯಾರದೇ ಕೆಲಸ ಇದ್ದರೂ ಮುಗಿಬಿದ್ದು ಮಾಡುವ ಇವರು ಅದರಿಂದಾಗಿ ಎಷ್ಟೋ ಸಲ ಬೈಗುಳ ತಿಂದದ್ದೂ ಇದೆ. ಯಾವುದರಿಂದಲೂ ವಿಚಲಿತರಾಗದೆ ಊರಿನ ಎಲ್ಲರಿಗೂ ಆಪ್ತರಾಗಿದ್ದರು.
ತೊಡಿಕಾನ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭ ಶ್ರಮದಾನಕ್ಕೆ ಬಂದವರಿಗೆ (ತನ್ನ ಕೆಲಸದ ಹೊರತಾಗಿ) ಸಮಯದ ಪರಿವೆಯೇ ಇಲ್ಲದೆ ಅಡುಗೆ ,ಚಹಾ ,ತಿಂಡಿ ನೀಡಿ ತನ್ನ ಸೇವೆ ಸಲ್ಲಿಸಿದ್ದರು. 2017 ರಲ್ಲಿ ಅಭೂತಪೂರ್ವವಾಗಿ ನಡೆದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅವರ ಅನುಪಸ್ಥಿತಿ ವಿಧಿಯ ದುರಂತವೇ ಸರಿ…

ನನ್ನ ಜೀವನದ ಏಳಿಗೆಯಲ್ಲಿ ಅನೇಕ ಮಹನೀಯರ ಪಾತ್ರವಿದೆ ಅದರಲ್ಲಿ ಉದಯಣ್ಣ ಕೂಡಾ ಒಬ್ಬರು. ತೊಡಿಕಾನ ದೇವಸ್ಥಾನಕ್ಕೆ ಸೇರಿದಾಗ ದೇವಸ್ಥಾನದ ಕೆಲಸಗಳಲ್ಲಿ ಅನುಭವಿಯಾದ ನನಗೆ ಹೆಗಲು ಕೊಟ್ಟವರು ಇವರೇ. ವೈದಿಕ ಕ್ರಿಯೆಗಳ ಅಧ್ಯಯನ ಇಲ್ಲದಿದ್ದರೂ ನೋಡಿ ತಿಳಿದ ಅನುಭವದ ಮೂಲಕ ತಿಳಿ ಹೇಳುತ್ತಿದ್ದರು. ನನ್ನ ಅತ್ಯಂತ ಆತ್ಮೀಯರಾಗಿದ್ದರು.

ಸೈಕಲ್ ಬ್ಯಾಲೆನ್ಸೇ ಇಲ್ಲದ ನಾನು ಕಲಿಯಲೆಂದು ಸೆಕೆಂಡ್ ಹ್ಯಾಂಡ್ ಬೈಕ್ ತೆಗೆದು ಕಲಿಯಲಾರದೆ ಎಲ್ಲರಿಂದ ಅಪಹಾಸ್ಯಕ್ಕೊಳಗಾಗಿದ್ದೆ. ಜೀವನದಲ್ಲಿ ಯಾವತ್ತೂ ಯಾವುದೇ ವಾಹನ ಚಾಲನೆ ಮತ್ತು ವಾಹನ ಖರೀದಿ ನನ್ನಿಂದ ಸಾಧ್ಯವಿಲ್ಲವೆಂದು ಜಿಗುಪ್ಸೆಗೊಳಗಾಗಿದ್ದೆ..ಆಗ ಉದಯಣ್ಣ ನನ್ನೊಂದಿಗೆ ಬೈಕ್ ನಲ್ಲಿ ಕುಳಿತು ಬೈಕ್ ಚಾಲನೆಗೆ ಪ್ರೇರೇಪಿಸಿದ ಕಾರಣ ನಾನೂ ಒಬ್ಬ ಚಾಲಕನಾದೆ….ಮುಂದೆ ಹೊಸ ದ್ವಿಚಕ್ರ ವಾಹನ ಖರೀದಿಸಿದಾಗ ಮಾತ್ರ ಉದಯಣ್ಣ ಇಲ್ಲವಾಗಿದ್ದರು. ಸದ್ಯ ಹೊಸ ಕಾರು ಕೂಡಾ ಖರೀದಿಸಿದೆ. ಆಗ ಉದಯಣ್ಣನ ನೆನಪಂತೂ ಖಂಡಿತಾ ಬಂತು. ಅವರು ಇರುತ್ತಿದ್ದರೆ ನನ್ನ ಮನೆಯವರಷ್ಟೇ ಖುಷಿಪಡುತ್ತಿದ್ದರು.

ನಾವು ಪ್ರೀತಿಸುವವರು ಸಿಗಬಹುದು..ಆದರೆ ನಮ್ಮನ್ನು ಪ್ರೀತಿಸುವವರು ಸಿಗುವುದು ವಿರಳ .

ಒಂದು ನಾಟಕ ಯಶಸ್ಸು ಕಾಣಬೇಕಾದರೆ ನಾಯಕ ಪಾತ್ರ ಮಾತ್ರ ಅಲ್ಲ, ಎಲ್ಲಾ ಪೋಷಕ ಪಾತ್ರಗಳೂ ಚೆನ್ನಾಗಿರಬೇಕು. ಹಾಗೆ ಒಬ್ಬನ ಜೀವನ ಸಫಲವಾಗಬೇಕಾದರೆ ಉದಯಮಯ್ಯರಂತಹ ಪ್ರೋತ್ಸಾಹಕರ ಅವಶ್ಯಕತೆ ನಿಜಕ್ಕೂ ಬೇಕು. ಅವರ ಬಗ್ಗೆ ಬರೆಯುತ್ತಾ ಹೋದರೆ ಅನೇಕವಿದೆ.
ಅವರ ನೆನಪಂತೂ ಅಜರಾಮರ..ನಮ್ಮಿಂದ ಮರೆಯಾದ ಉದಯಣ್ಣನಿಗೊಂದು ಅಕ್ಷರನಮನ………..
-ಕೇಶವಮೂರ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.